More

    1.81 ಕೋಟಿ ರೂ.ಗೂ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹ

    ಬೆಳಗಾವಿ

    ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಮಾ.13ರಿಂದ 17ರ ವರೆಗೆ ಹುಂಡಿ ಎಣಿಕೆ ಮಾಡಲಾಗಿದ್ದು, 1.81 ಕೋಟಿ ರೂ.ಗೂ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
    2023ರ ಜನವರಿ ಹಾಗೂ ೆಬ್ರವರಿಯಲ್ಲಿ ನಡೆದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಜಾತ್ರೆಗೆ ಬಂದಿದ್ದ ಭಕ್ತರು ಯಲ್ಲಮ್ಮದೇವಿ ದೇವಸ್ಥಾನ ಹುಂಡಿಗೆ ಹಾಕಿದ್ದ 1.66 ಕೋಟಿ ನಗದು, 12.83 ಲಕ್ಷ ರೂ.ಮೌಲ್ಯದ 235 ಗ್ರಾಂ ಚಿನ್ನಾಭರಣ ಹಾಗೂ 2.46 ಲಕ್ಷ ರೂ.ಮೌಲ್ಯದ 3.7 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿವೆ. ವಿಶೇಷವೆಂದರೆ ಭಕ್ತರು ಕಾಣಿಕೆ ರೂಪದಲ್ಲಿ ವಿದೇಶಿ ಕರೆನ್ಸಿ ಕೂಡ ಹಾಕಿದ್ದಾರೆ.
    ಧಾರ್ಮಿಕ ದತ್ತಿ ಇಲಾಖೆ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಸವದತ್ತಿ ತಹಸೀಲ್ದಾರ್ ಕಚೇರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಹಾಗೂ ಯಲ್ಲಮ್ಮ ದೇವಿ ದೇವಸ್ಥಾನ ಸಿಬ್ಬಂದಿ ಐದು ದಿನ ಹುಂಡಿ ಎಣಿಕೆ ಮಾಡಿದರು. ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಂಪಿಬಿ ಮಹೇಶ ಮಾತನಾಡಿ, ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗುವುದು. ಭಕ್ತರಿಗೆ ಶುದ್ಧ ಕುಡಿಯುವ ನೀರು, ವಸತಿ ಮತ್ತಿತರ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜೀರಗ್ಯಾಳ, ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮೀ ಹೂಲಿ, ಪುಂಡಲೀಕ ಮೇಟಿ, ಶಶಿಕಲಾ ಚಂದರಗಿ, ಶೈಲಾ ಪತ್ತಾರ, ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ, ಸಂತೋಷ ಶಿರಸಂಗಿ, ಎಸ್.ಎಲ್.ಯಲಿಗಾರ, ಎಂ.ವಿ.ಮುಳ್ಳೂರ, ಡಿ.ಆರ್.ಚವ್ಹಾಣ, ಪಿ.ಎ್.ಗೋವನಕೊಪ್ಪ, ಎಂ.ಸಿ.ಮಣ್ಣಿಕೇರಿ, ಪಂಡಿತ ಯಡೂರಯ್ಯ, ಪಿ.ರಾಜಶೇಖಯ್ಯ ದೇವಸ್ಥಾನ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts