More

    ಕಾಯಿನ್ ಟ್ರೇಡಿಂಗ್ ನೆಪದಲ್ಲಿ 1.51 ಕೋಟಿ ಧೋಖಾ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ರೈಟಿಂಗ್ ನೀಡಿದರೆ ಕೈತುಂಬ ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 1.51 ಕೋಟಿ ರೂಪಾಯಿ ಸೈಬರ್ ಕಳ್ಳರು ದೋಚಿದ್ದಾರೆ.

    ಗಿರಿನಗರ 2ನೇ ಹಂತದ 62 ವರ್ಷದ ವ್ಯಕ್ತಿ ಮೋಸಕ್ಕೆ ಒಳಗಾದವರು. ಇವರು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾ.23ರಂದು ದೂರುದಾರರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಜಾಲತಾಣದಲ್ಲಿ ಟಾಸ್ಕ್ ಕೊಡುತ್ತಾರೆ. ಅದಕ್ಕೆ ರೈಟಿಂಗ್ ಕೊಟ್ಟರೇ ಕೈತುಂಬ ಸಂಪಾದನೆ ಮಾಡಬಹುದು. ಒಮ್ಮೆ 5 ಸ್ಟಾರ್ ರೈಟಿಂಗ್ ಕೊಟ್ಟರೇ 2 ಸಾವಿರ ರೂ. ಸಿಗಲಿದೆ ಎಂದು ಆಮಿಷವೊಡ್ಡಿದ್ದಾರೆ.
    ಅದರಂತೆ ಮೊದಲು ದೂರುದಾರರಿಗೆ ಟಾಸ್ಕ್ ಕೊಟ್ಟ 5 ಸ್ಟಾರ್ ರೈಟಿಂಗ್ ಕೊಟ್ಟು ಅವರ ವ್ಯಾಲೆಟ್‌ಗೆ ಹಣವನ್ನೂ ಜಮೆ ಮಾಡಿದ್ದಾರೆ. ಇದಾದ ಮೇಲೆ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿಕೊಂಡು ಕಾಯಿನ್ ನೆಟ್ ಎಂಬ ವೆಬ್‌ಸೈಟ್‌ನಲ್ಲಿ ಕಾಯಿನ್ ಟ್ರೇಡಿಂಗ್ ಮಾಡಬಹುದು. ಇದರಲ್ಲಿ ಹಣ ಹೂಡಿಕೆ ಮಾಡಿದರೇ ಕೂತಲಿಯೇ ಹೆಚ್ಚಿನ ಲಾಭ ಸಿಗಲಿದೆ ಎಂದು ಆಸೆ ತೋರಿಸಿದ್ದರು.

    ದುರಾಸೆಗೆ ಒಳಗಾದ ದೂರುದಾರ, ವಂಚಕರ ಮರ್ಮವನ್ನು ಅರಿಯದೆ ಹಂತ ಹಂತವಾಗಿ 1.51 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಯಾವುದೇ ಲಾಭಾಂಶ ಮಾತ್ರ ಲಭ್ಯವಾಗಿಲ್ಲ. ಕೊನೆಗೆ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯುವ ಉದ್ದೇಶಕ್ಕೆ ದೂರುದಾರ, ಕರೆ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡು ಮೋಸ ಮಾಡಿದ್ದರು. ನೊಂದ ವ್ಯಕ್ತಿ, ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts