More

    1.5 ಲಕ್ಷ ರೂ. ಲಂಚ ಪಡೆಯುವಾಗ ಸೆರೆ

    ಶಿವಮೊಗ್ಗ: ನಿವೇಶನದ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲೂಕು ಕಚೇರಿಯ ಆರ್‌ಆರ್‌ಟಿ ಶಾಖೆಯ ಶಿರಸ್ತೇದಾರ್ 1.5 ಲಕ್ಷ ರೂ. ನಗದು ಸಹಿತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಸ್ತೆದಾರ್ ಅರುಣ್‌ಕುಮಾರ್ ಲೋಕಾ ಬಲೆಗೆ ಬಿದ್ದವರು.
    ವಿನಾಯಕ ನಗರದ ಹನುಮಂತ ಆರ್ ಬನ್ನಿಕೋಡ್ ಎಂಬುವರು ನೀಡಿದ ದೂರಿನ ಮೇರೆಗೆ ಚಿತ್ರದುರ್ಗದ ಲೋಕಾಯುಕ್ತ ಪ್ರಭಾರ ಎಸ್ಪಿ ಎಲ್.ವಾಸುದೇವರಾಯ ಮಾರ್ಗದರ್ಶನದಲ್ಲಿ ಸೋಮವಾರ ಮಧ್ಯಾಹ್ನ ಪೊಲೀಸರು ದಾಳಿ ಮಾಡಿ ಶಿರಸ್ತೆದಾರ್ ಅರುಣ್‌ಕುಮಾರ್ ಅವರನ್ನು ಬಂಧಿಸಿದ್ದಾರೆ.
    2022ರಲ್ಲಿ ಹನುಮಂತ, ಬಿ.ಎನ್.ಶ್ರೀನಿವಾಸ್, ಪಿ.ಪ್ರಸನ್ನ ಎಂಬುವರು ಜಂಟಿಯಾಗಿ ಕಸಬಾ-1ನೇ ಹೋಬಳಿಯ ಮಲ್ಲಿಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 84ರಲ್ಲಿ ಪಿ.ಮಹಬೂಬ್ ಸಾಬ್ ಎನ್ ಹುಸೇನ್ ಸಾಬ್ ಎಂಬುವರಿಂದ 2 ಎಕರೆ ಜಮೀನನ್ನು 32 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದರು. ಪಿ.ಮಹಬೂಬ್ ಅವರು ಮೂವರ ಹೆಸರಿಗೆ ಜಂಟಿಯಾಗಿ ವಿಲ್ ಕೂಡ ಮಾಡಿದ್ದರು. ಆದರೆ ಇತ್ತೀಚೆಗೆ ಪಿ.ಮಹಬೂಬ್ ಸಾಬ್ ನಿಧನರಾದ ಹಿನ್ನಲೆಯಲ್ಲಿ ಹನುಮಂತ ಅವರು ತಾಲೂಕು ಕಚೇರಿಗೆ ತೆರಳಿ ಖಾತೆ ಬದಲಾವಣೆಗೆ ಕೇಳಿದಾಗ ಶಿರಸ್ತೆದಾರ್ ಅರುಣ್‌ಕುಮಾರ್ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
    ಈ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆಯಂತೆ ಹನುಮಂತ ಅವರು ಕಚೇರಿ ತೆರಳಿ 1.5 ಲಕ್ಷ ರೂ. ನೀಡಿದ್ದು ಅರುಣ್‌ಕುಮಾರ್ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಟ್ರಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಇನ್‌ಸ್ಪೆಕ್ಟರ್‌ಗಳಾದ ಎಚ್.ರಾಧಾಕೃಷ್ಣ, ವೈ.ಎ. ಶಿಲ್ಪಾ ಮತ್ತು ಸಿಬ್ಬಂದಿಗಳಾದ ಪ್ರಸನ್ನ, ಮಹಂತೇಶ, ಯೋಗೀಶ್, ಸುರೇಂದ್ರ, ಬಿ.ಟಿ.ಚನ್ನೇಶ, ಪ್ರಶಾಂತ್‌ಕುಮಾರ್, ಅರುಣ್ ಕುಮಾರ್, ದೇವರಾಜ, ರಘುನಾಯ್ಕ, ಪುಟ್ಟಮ್ಮ, ಸಾವಿತ್ತಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್‌ಕುಮಾರ್, ಜಯಂತ್, ವಿ.ಗೋಪಿ, ಕೆ.ಟಿ.ಮಾರುತಿ, ಎಂ.ವೀರೇಶ, ಆರ್.ವೆಂಕಟೇಶ್‌ಕುಮಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts