More

    1.40 ಲಕ್ಷ ಮೌಲ್ಯದ ಮರಳು ವಶ

    ಸೇಡಂ: ಯಡ್ಡಳ್ಳಿ ಮತ್ತು ಸಂಗಾವಿ ಗ್ರಾಮಗಳ ಕಾಗಿಣೆ ನದಿ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿ ಅಂದಾಜು 1.40 ಲಕ್ಷ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದಿದೆ.
    ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸುಶೀಲಕುಮಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿದ ತಹಸೀಲ್ದಾರ್ ಬೆಣ್ಣೆಶಿರೂರ ಅವರು, ಇತ್ತೀಚೆಗೆ ಧಾರಾಕಾರ ಮಳೆಯಿಂದ ಕಾಗಿಣೆ ತುಂಬಿ ಹರಿದಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಮರಳುಗಳ್ಳರು ನದಿಯನ್ನು ಒಡಲನ್ನು ಖಾಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ದಾಳಿ ನಡೆಸಿ ಮರಳು ವಶಕ್ಕೆ ಪಡೆಯಲಾಗಿದೆ ಎಂದರು.
    ನದಿಯ ಅಕ್ಕಪಕ್ಕದಲ್ಲಿ ಸುಮಾರು 8 ಟಿಪ್ಪರ್ನಷ್ಟು ಮರಳು ಶೇಖರಿಸಿಡಲಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ನದಿ ದಡದಲ್ಲಿನ ಜಮೀನುಗಳ ಮಾಲೀಕರು ಇದರಲ್ಲಿ ಶಾಮಿಲಾಗಿರುವ ಅನುಮಾನವಿದ್ದು, ಅವರಿಗೂ ನೋಟಿಸ್ ನೀಡಿ ಸ್ಪಷ್ಟನೆ ಕೇಳಲಾಗುವುದು. ಯಾವುದೇ ಕಾರಣಕ್ಕೂ ಮರುಳುಗಳ್ಳರನ್ನು ಬಿಡುವುದಿಲ್ಲ. ಇದರಿಂದ ಸಕರ್ಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾಜರ್ುನ ಯಂಪುರೆ, ಪ್ರಮುಖರಾದ ರೇವಣಸಿದ್ದಪ್ಪ, ರವಿ, ಶ್ರೀಕಾಂತ, ಕಾಶೀನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts