More

    08 ರಂದು ಮೀನು ಮಾರುಕಟ್ಟೆ ಆರಂಭ

    ಯಾದಗಿರಿ: ನಗರದ ಹೊರ ವಲಯದಲ್ಲಿನ ನಿಮರ್ಿಸಲಾದ ಹೈಟೆಕ್ ಮೀನು ಮಾರುಕಟ್ಟೆ ಅ.08ರಿಂದ ಕಾಯರ್ಾರಂಭ ಮಾಡಲಿದೆ ಎಂದು ಕೋಲಿ ಸಮಾಜದ ಉಮೇಶ ಮುದ್ನಾಳ್ ತಿಳಿಸಿದರು.

    ಗುರುವಾರ ಇಲ್ಲಿನ ದೇವಿ ದೇವಸ್ಥಾನದ ಆವರಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಮ್ಮ ನಿರಂತರ ಹೋರಾಟದ ನಂತರ ನಿಮರ್ಿಸಿದ್ದ ಮೀನು ಮಾರುಕಟ್ಟೆ ಪ್ರದೇಶಕ್ಕೆ ಮೂಲಸೌಕರ್ಯದ ಅಭಾವ ಎದುರಾಗಿತ್ತು. ಇದೀಗ ಸಿಸಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿ ಎಲ್ಲ ಸೌಕರ್ಯ ಮಾಡಲಾಗಿದೆ. ಹೊಸ ಮಾರುಕಟ್ಟೆಯಲ್ಲಿ ಸ್ವಚ್ಛ ಹಾಗೂ ಶುದ್ಧ ಮೀನುಗಳನ್ನು ಮಾರಾಟ ಮಾಡಲು ಎಲ್ಲ ಅನುಕೂಲಗಳು ಇದ್ದು ಇದು ಯಾದಗಿರಿ ಮೀನು ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ ಎಂದು ಹೇಳಿದರು.

    ಇದುವರೆಗೆ ಶಾಸ್ತ್ರಿ ವೃತ್ತದಲ್ಲಿ ರಸ್ತೆ ಬದಿಯಲ್ಲಿ ಮೀನುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಸಾರ್ವಜನಿಕರು ಸಾಕಷ್ಟು ಮುಜುಗರ ಅನುಭವಿಸುವಂತಾಗಿತ್ತು. ಮೀನು ಮಾರಾಟ ಪ್ರಕ್ರಿಯೆ ಹೈಟೆಕ್ ಮಾರುಕಟ್ಟೆಗೆ ಸ್ಥಳಾಂತರ ಆಗುತ್ತಿರುವುದು ಸಂತಸದ ಸಂಗತಿ ಎಂದರು.

    ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಮೀನುಗಾರರ ಸಂಘದ ಮಹಾಸಭೆಯೂ ಜರುಗಿತು. ಮೀನುಗಾರಿಕೆ ಇಲಾಖೆ ಸಹಾಯಕ ನಿದರ್ೇಶಕ ರಾಜಣ್ಣ ಮಾತನಾಡಿ, ಹೈಟೆಕ್ ಮೀನು ಮಾರುಕಟ್ಟೆಗೆ ಸ್ಥಳಾಂತರಗೊಂಡು ಸುಸಜ್ಜಿತ ಮೀನು ಮಾರಾಟ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts