More

    ಹೋರಾಟಕ್ಕೆ ಸೈಲ್ ನಿವೃತ್ತ ನೌಕರರ ಸಾಥ್

    ಭದ್ರಾವತಿ: ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ಪ್ರತಿಷ್ಠಿತ ವಿಐಎಸ್‍ಎಲ್ ಕಾರ್ಖಾನೆ ಸ್ಥಗಿತಗೊಳಿಸಲು ತೆಗೆದುಕೊಂಡಿರುವ ನಿರ್ಧಾರ ತಕ್ಷಣ ಕೈಬಿಡುವಂತೆ ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿ ಆಗ್ರಹಿಸಿತು.
    ಕಾರ್ಖಾನೆ ಎದುರು ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಮಂಗಳವಾರ ಬೆಂಬಲ ಸೂಚಿಸಿ ಮಾತನಾಡಿದ ಸಮಿತಿ ಪ್ರಮುಖರು, ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದಾಗಿ ರಾಜ್ಯ ಸರ್ಕಾರದಿಂದ ಹಸ್ತಾಂತರ ಮಾಡಿಕೊಂಡು ಇದೀಗ ಮುಚ್ಚಲು ಮುಂದಾಗಿರುವುದು ವಿಪರ್ಯಾಸ ಎಂದು ದೂರಿದರು.
    ನೀರು, ವಿದ್ಯುತ್, ಕೌಶಲಯುಕ್ತ ಕಾರ್ಮಿಕರು, ಮೂಲ ಸೌಲಭ್ಯ ಹೊಂದಿರುವ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಸರಿಯಲ್ಲ. ಈ ಹಿಂದೆ ಉಕ್ಕು ಪ್ರಾ„ಕಾರ ತನ್ನ ಅ„ೀನದಲ್ಲಿರುವ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದು, ಅದು ಸಾಧ್ಯವಾಗಲಿಲ್ಲ. ಕಾರ್ಖಾನೆ ಮುನ್ನಡೆಸಿಕೊಂಡು ಹೋಗಲು ಅಗತ್ಯವಿರುವ ಸಂಪನ್ಮೂಲ ನಮ್ಮಲ್ಲಿಯೇ ಇದೆ. ಆದರೂ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ. ಇದರ ವಿರುದ್ಧ ಸಮಿತಿ ಹೋರಾಟ ನಡೆಸಲಿದೆ ಎಂದರು.
    ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಕಾರ್ಮಿಕ ಕುಟುಂಬಗಳ ಮೇಲೆ, ಸಮಾಜದ ವಿವಿಧ ಕ್ಷೇತ್ರಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಸರ್ಕಾರ ಮನಗಾಣಬೇಕು. ಆರಂಭÀದಲ್ಲಿಯೇ ಕಾರ್ಖಾನೆಗೆ ಬಂಡವಾಳ ತೊಡಗಿಸಿ, ಆಧುನೀಕರಣ ಮಾಡಿದ್ದರೆ ಮುಚ್ಚುವ ಪರಿಸ್ಥಿತಿಗೆ ಹೋಗುತ್ತಿರಲಿಲ್ಲ. ನಿಮ್ಮೆಲ್ಲರ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ನಾವು ಸಹ ನಮ್ಮ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಒಂದು ದಿನದ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿದರು.
    ಒಕ್ಕೂಟದ ಅಧ್ಯಕ್ಷ ಡಾ. ವಿ.ಎನ್ ಶರ್ಮಾ(ರಾಂಚಿ), ಉಪಾಧ್ಯಕ್ಷರಾದ ಎಸ್.ಕೆ ಘೋಷ್(ಕೊಲ್ಕತಾ), ಅಭಯ್‍ಕುಮಾರ್ ದಾಸ್(ರೊರ್ಕೆಲಾ), ಪ್ರಧಾನ ಕಾರ್ಯದರ್ಶಿ ರಾಮ್ ಅಗರ್ ಸಿಂಗ್(ಬೊಕಾರೋ), ವಿಐಎಸ್‍ಎಲ್ ನಿವೃತ್ತ ಕಾರ್ಮಿಕರ ಕಾರ್ಮಿಕರ ಕಲ್ಯಾಣ ಕೇಂದ್ರದ ಗೌರವಾಧ್ಯಕ್ಷ ಜೆ.ಎಸ್.ನಾಗಭೂಷಣ್, ಅಧ್ಯಕ್ಷ ಬಿ.ಜಿ.ರಾಮಲಿಂಗಯ್ಯ, ಉಪಾಧ್ಯಕ್ಷ ಎಸ್.ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಚ್.ಎಚ್.ಹನುಮಂತ ರಾವ್, ಡಿ.ನಂಜಪ್ಪ, ಖಜÁಂಚಿ ಎಲ್.ಬಸವರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ನರಸಿಂಹಯ್ಯ, ಎಸ್.ಎಸ್.ಭೈರಪ್ಪ, ಮಹೇಶ್ವರಪ್ಪ, ಎಚ್.ರಾಮಪ್ಪ, ಕೆಂಪಯ್ಯ, ಎಸ್.ನರಸಿಂಹಚಾರ್, ಜಿ.ಶಂಕರ್ ಇತರರಿದ್ದರು.
    ಐಎಎಸ್ ಅ„ಕಾರಿ ಕಾರಣ: 1980ರಲ್ಲೇ ಕಾರ್ಖಾನೆ ನಷ್ಟದತ್ತ ಸಾಗಿತು. ಆಗ ಐಎಎಸ್ ಅ„ಕಾರಿಯೊಬ್ಬರನ್ನು ಈ ಕಾರ್ಖಾನೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಆದರೆ ಅವರಿಗೆ ಸಾರ್ವಜನಿಕ ಸೇವೆ ಬಗ್ಗೆ ಅರಿವಿತ್ತೇ ಹೊರತು ಕೈಗಾರಿಕೆಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಜ್ಞಾನ ಇರಲಿಲ್ಲ. ಪರಿಣಾಮವಾಗಿ 1989ರಲ್ಲಿ ಸೈಲ್‍ಗೆ ಸೇರ್ಪಡೆ ಮಾಡಲಾಯಿತು. ಇತ್ತೀಚೆಗೆ ಕಬ್ಬಿಣದ ಅದಿರು ಪ್ರದೇಶವನ್ನು ಮಂಜೂರು ಮಾಡಿದರೂ ಕಾರ್ಖಾನೆ ಮುಚ್ಚುವ ಹುನ್ನಾರ ನಡೆಸಿ ಉತ್ಪಾದನೆ ಸ್ಥಗಿತಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಭೆಯಲ್ಲಿದ್ದ ಪ್ರಮುಖರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts