More

    ಹೋಮಿಯೋಪಥಿ ವಿಚಾರ ಸಂಕಿರಣ 16ಕ್ಕೆ

    ದಾವಣಗೆರೆ: ಹೋಮಿಯೋಪಥಿ ವೈದ್ಯಕೀಯ ಪದ್ದತಿಯ ಪಿತಾಮಹ ಡಾ. ಸಿ.ಎಫ್. ಸಾಮ್ಯುಯೆಲ್ ಹಾನ್ನೆಮನ್ ಅವರ 268ನೇ ಜನ್ಮದಿನದ ಅಂಗವಾಗಿ, ಏ.16ರಂದು ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಏ.16ರಂದು ಒಂದು ದಿನದ ರಾಜ್ಯ ಮಟ್ಟದ ಹೋಮಿಯೋಪಥಿ ವಿಚಾರ ಸಂಕಿರಣ ನಡೆಯಲಿದೆ.
    ಹೋಮಿಯೋಪಥಿ ವೈದ್ಯಕೀಯ ಸಂಘ ಆಯೋಜಿಸಿರುವ ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧೆಡೆಗಳಿಂದ 250 ಹೋಮಿಯೋಪಥಿ, ಮನಶ್ಯಾಸ್ತ್ರ ಹಾಗೂ ಇತರೆ ವಿಭಾಗದ ವೈದ್ಯರು ಭಾಗವಹಿಸುವರು ಎಂದು ಸಂಘದ ಕಾರ್ಯದರ್ಶಿ ಡಾ.ಎ.ಎನ್.ಸುಂದರೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಏ.16ರಂದು ಬೆಳಗ್ಗೆ 10 ಗಂಟೆಗೆ ಎಸ್ಸೆಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಚಾರ ಸಂಕಿರಣ ಉದ್ಘಾಟಿಸುವರು. ಮಾನಸಿಕ ರೋಗಗಳ ತಜ್ಞ ವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಹಾಗೂ ಮಂಗಳೂರಿನ ಹೋಮಿಯೋಪಥಿ ಕಾಲೇಜಿನ ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ಯು.ಕೆ. ಗಿರೀಶ್ ನಾವಡ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.
    ಅತಿಥಿಗಳಾಗಿ ಡಾ.ವೀರಬ್ರಹ್ಮಚಾರಿ, ಡಾ. ಅಶ್ವತ್ಥನಾರಾಯಣ, ಎಂ. ಪ್ರಕಾಶಕುಮಾರ್ ಇತರರು ಭಾಗವಹಿಸುವರು. ಸಂಜೆ 4ರಿಂದ 5ರವರೆಗೆ ಡಾ.ಸಿ.ಆರ್.ಚಂದ್ರಶೇಖರ್ ಅವರೊಂದಿಗೆ ಸಂವಾದ ನಡೆಯಲಿದ್ದು, ಸಾರ್ವಜನಿಕರೂ ಭಾಗವಹಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಶರತ್‌ರಾಜು, ಜಿ.ಎಸ್.ಗಿರೀಶ್, ಡಾ.ಎಚ್.ಎಸ್.ಪಾಂಡುರಂಗ, ಪ್ರಭುದೇವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts