More

    ಹೊಸ ಮತಗಟ್ಟೆ ಸ್ಥಾಪನೆಗೆ ಆಯೋಗಕ್ಕೆ ಪ್ರಸ್ತಾವನೆ

    ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಮಾಹಿತಿ


    ಚಾಮರಾಜನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲ ಮತಗಟ್ಟೆಗಳ ಮರು ವಿಂಗಡಣೆ, ಸ್ಥಳಾಂತರ ಹಾಗೂ ಹೊಸ ಮತಗಟ್ಟೆಗಳ ಸ್ಥಾಪನೆ ಸಂಬಂಧ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ತಿಳಿಸಿದರು.


    ಮತಗಟ್ಟೆಗಳ ಮರುವಿಂಗಡಣೆ, ಸ್ಥಳಾಂತರ ಹಾಗೂ ಹೊಸ ಮತಗಟ್ಟೆಗಳ ಸ್ಥಾಪನೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಕೊಳ್ಳೆಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್, ಚಲುವನಹಳ್ಳಿ, ಮೊಳಗನಕಟ್ಟೆ ಮತ್ತು ಹನೂರು ತಾಲೂಕಿನ ತೊಳಸಿಕೆರೆ, ಪಾಲಾರ್, ತೋಕೆರೆ, ಪಚ್ಚೇದೊಡ್ಡಿ ಹಾಗೂ ಬಿ.ಜಿ.ದೊಡ್ಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಹೊಸ ಮತಗಟ್ಟೆ ತೆರೆಯಬೇಕಾಗಿದೆ ಎಂದು ತಿಳಿಸಿದರು.


    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರನ್ನು ಗುರುತಿಸಲು ಪಟ್ಟಿಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವವರು ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಗೆ ಅಳವಡಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

    ಚುನಾವಣಾ ತಹಸೀಲ್ದಾರ್ ಆರ್.ಜಯಪ್ರಕಾಶ್, ಚುನಾವಣಾ ಶಿರಸ್ತೇದಾರ್ ನಾಗರಾಜು, ಕೃಪಾಕರ, ರವಿ, ಶಶಾಂಕ್, ಸುರೇಖಾ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುಹೇಲ್ ಅಲಿ ಖಾನ್, ಎಸ್.ಬಾಲಸುಬ್ರಮಣ್ಯ, ಬ್ಯಾಡ್‌ಮೂಡ್ಲು ಬಸವಣ್ಣ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts