More

    ಹೊಲದಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ

    ಲಕ್ಷೆ್ಮೕಶ್ವರ: ಕರೊನಾ ಸೋಂಕು ಭೀತಿಯನ್ನಷ್ಟೇ ಮೂಡಿಸಿಲ್ಲ. ಬದಲಾಗಿ, ರೈತರ, ಕೂಲಿಕಾರರ, ಬಡವರ ಬದುಕನ್ನು ದುಸ್ತರಗೊಳಿಸಿದೆ. ಇದೀಗ ತೋಟಗಾರಿಕೆ ಬೆಳೆಗಾರರು ಬೆಳೆದಿರುವ ಬೆಳೆಯನ್ನು ಮಾರಲಾಗದೇ ಕಣ್ಣೀರು ಹಾಕುವಂತಾಗಿದೆ.

    ತಾಲೂಕಿನ ಬೂದಿಹಾಳ ಗ್ರಾಮದ ರೈತ ರಾಮಶೆಟ್ಟಿ ಶೇಖಪ್ಪ ರಾಮಶೆಟ್ಟರ್ ತಮ್ಮ 2 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಅತ್ತ ಮಾರುಕಟ್ಟೆವರೆಗೂ ಒಯ್ಯಲಾಗದೆ ಇತ್ತ ವ್ಯಾಪಾರಸ್ಥರು ಖರೀದಿಸಲು ಬಾರದಿರುವುದು ಕಣ್ಣೀರಾಗುವಂತೆ ಮಾಡಿದೆ. ಹೀಗಾಗಿ ಕೊಯ್ಲಿಗೆ ಬಂದ ಫಸಲು ಜಮೀನಿನಲ್ಲಿಯೇ ಕೊಳೆಯುವಂತಾಗಿದೆ.

    2 ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು 35-40 ಸಾವಿರ ರೂ. ಖರ್ಚು ಮಾಡಿದ್ದಾರೆ. ಉತ್ತಮ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದ ಇವರಿಗೆ ಲಾಕ್​ಡೌನ್​ನಿಂದಾಗಿ ಮಾರಾಟಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದರಿಂದಾಗಿ ಮಾಡಿದ ಖರ್ಚು ವಾಪಸ್ ಬಾರದಂತಾಗಿದ್ದು, ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿದ್ದೇನೆ ಎನ್ನುತ್ತಾರೆ ರೈತ ರಾಮಶೆಟ್ಟಿ.

    ತಾಲೂಕಿನ ಬೂದಿಹಾಳ, ಅಂಕಲಿ, ತಂಗೋಡ, ಹೆಬ್ಬಾಳ, ಇಟಗಿ, ಮತ್ತಿತರರ ನದಿ ಪಾತ್ರದ ಜಮೀನುಗಳಲ್ಲಿನ ಕೆಲ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಆದರೆ, ಕರೊನಾ ಹೆಮ್ಮಾರಿ ಈ ಎಲ್ಲ ರೈತರ ಮಗ್ಗುಲನ್ನೇ ಮುರಿದಿದೆ.

    ತಾಲೂಕಿನಲ್ಲಿ ಹತ್ತಾರು ರೈತರು ನೂರಾರು ಎಕರೆಯಲ್ಲಿ ದಾಳಿಂಬೆ, ಬಾಳೆ, ಪೇರಲ, ಚಿಕ್ಕು ಸೇರಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದಕ್ಕೂ ಕರಾನಾ ಮಹಾಮಾರಿಯಿಂದಾಗಿ ಹಣ್ಣುಗಳಿಗೂ ಬೇಡಿಕೆ ಇಲ್ಲದಂತಾಗಿಸಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts