More

    ಹೊಂಬುಜ ಜಾತ್ರೆಗೆ ವಿಧ್ಯುಕ್ತ ಚಾಲನೆ

    ರಿಪ್ಪನ್‍ಪೇಟೆ: ಸಮೀಪದ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಪಾರಂಪರಿಕವಾಗಿ ನಡೆದು ಬಂದ ಭಗವಾನ್ ಶ್ರೀಪಾಶ್ರ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ಅಮ್ಮನವರ ಮಹಾರಥೋತ್ಸಕ್ಕೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಿದರು.
    ಸಾಂಪ್ರದಾಯಿಕವಾಗಿ 6 ದಿನಗಳ ಕಾಲ ಈ ಜಾತ್ರೆ ಜರುಗಲಿದೆ. ಭಾನುವಾರ ಬೆಳಗ್ಗೆ ಧಾರ್ಮಿಕ ಆಚರಣೆಗಳೊಂದಿಗೆ ಆರಂಭವಾಯಿತು. ಸಂಜೆ ಶ್ರೀ ದೇವಿಯ ನಾಗವಾಹನ ಉತ್ಸವ ಜರುಗಿತು. ಮಾ.13ರಂದು ಸಿಂಹವಾಹನೋತ್ಸವ, 14ಕ್ಕೆ ಬೆಳ್ಳಿ ಪುಷ್ಪರಥೋತ್ಸವ, 15ಕ್ಕೆ ಮೂಲಾನಕ್ಷತ್ರದಂದು ಮಹಾರಥೋತ್ಸವ, 16ಕ್ಕೆ ಭಗವಾನ್ ಶ್ರೀಪಾಶ್ರ್ವನಾಥ ಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ, 17ಕ್ಕೆ ಕುಂಕುಮೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಜಗದ್ಗುರುಗಳು ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts