More

    ಹೈನುಗಾರಿಕೆಯಿಂದ ಆರ್ಥಿಕ ಸದೃಢತೆ

    ಶಾಸಕ ಸಿ.ಎನ್.ಬಾಲಕೃಷ್ಣ ಅಭಿಮತ, ದಾಸರಹಳ್ಳಿ ಸಂಘದ ನೂತನ ಕಟ್ಟಡ ಉದ್ಘಾಟನೆ

    ಚನ್ನರಾಯಪಟ್ಟಣ: ಹೈನುಗಾರಿಕೆ ಅವಲಂಬಿಸಿರುವ ಅದೆಷ್ಟೋ ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
    ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ 8.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಕೃಷಿಯ ಜತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
    ಸಂಘದ ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್ ವತಿಯಿಂದ 3 ಲಕ್ಷ ರೂ., ಹಾಸನ ಹಾಲು ಒಕ್ಕೂಟದ ವತಿಯಿಂದ 2 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 75 ಸಾವಿರ ರೂ. ಪ್ರೋತ್ಸಾಹಧನ ಲಭ್ಯವಾಗಿದ್ದು, ಉಳಿದ 3 ಲಕ್ಷ ರೂ. ಹಣವನ್ನು ಸಂಘವೇ ಭರಿಸಿದೆ ಎಂದು ತಿಳಿಸಿದರು.
    ಹಿರೀಸಾವೆ ಹೋಬಳಿಯ ತೋಟಿಕೆರೆ ಏತನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿ ಈಗಾಗಲೇ 14.5 ಕಿ.ಮೀ ನಡೆದಿದ್ದು 2 ಕಿ.ಮೀ. ಮಾತ್ರ ಬಾಕಿ ಇದೆ. ಜಾಕ್‌ವೆಲ್ ಹಾಗೂ ಚೇಂಬರ್ ನಿರ್ಮಾಣ ಕಾಮಗಾರಿಗೆ ಕಳೆದ ವಾರ ಚಾಲನೆ ನೀಡಲಾಗಿದೆ ಎಂದರು.
    ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಾಲೂಕು ಪಂಚಾಯಿತಿ ಸದಸ್ಯೆ ಪ್ರಮೀಳಾ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೆರೆ ಮಂಜೇಗೌಡ, ಕಬ್ಬಳಿ ಸೊಸೈಟಿ ಅಧ್ಯಕ್ಷ ಡಿ.ಸಿ.ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಎಲ್.ಕುಮಾರಸ್ವಾಮಿ, ಕಬ್ಬಳ್ಳಿ ಗ್ರಾಪಂ ಪಿಡಿಒ ಹನುಮೇಗೌಡ, ಸಂಘದ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಮಂಜೇಗೌಡ, ನಿರ್ದೇಶಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts