More

    ಹೆಸರು ಬೆಳೆಗೆ ಕೀಟ ಕಾಟ

    ಲಕ್ಷ್ಮೇಶ್ವರ: ಪ್ರಸಕ್ತ ಮುಂಗಾರಿನ ಭರವಸೆಯೊಂದಿಗೆ ಬಿತ್ತನೆ ಮಾಡಿರುವ ಹೆಸರು ಬೆಳೆಗೆ ಕೀಟಬಾಧೆ ಮತ್ತು ಹಳದಿ ರೋಗ ಕಾಣಿಸಿಕೊಂಡು ರೈತರನ್ನು ಚಿಂತೆಗೀಡು ಮಾಡಿದೆ. ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿಯೇ 10,045 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಉತ್ತಮವಾಗಿರುವ ಬೆಳೆಗೆ ರೋಗ ಆವರಿಸಿಕೊಳ್ಳುತ್ತಿದೆ.

    ಹೂವು ಬಿಡುವ ಹಂತದಲ್ಲಿರುವ ಬೆಳೆಗೆ ಸುರಳಿಪುಚಿ, ರಸಹೀರುವ ಕೀಟ ಬಾಧೆ, ಎಲೆಚುಕ್ಕಿ, ಹಳದಿ ನಂಜಾಣು ಮತ್ತು ತಾಮ್ರದ ರೋಗಗಳು ಕಾಣಿಸಿಕೊಂಡಿವೆ.

    ಲಕ್ಷ್ಮೇಶ್ವರ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಮಾಡಳ್ಳಿ ಮತ್ತಿತರ ಕಡೆ ಬೆಳೆಗೆ ರೋಗ ಬಾಧೆ ಕಾಣಿಸಿಕೊಳ್ಳುತ್ತಿದೆ.

    ಪರಿಹಾರ ಕ್ರಮಕ್ಕೆ ಸೂಚನೆ:

    ಶುಕ್ರವಾರ ಕೃಷಿ ಇಲಾಖೆಯ ಕೀಟ ತಜ್ಞರಾದ ಡಾ.ಸಿ.ಎಂ. ರಫಿ ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಹೆಸರು ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಪರಿಹಾರ ಕ್ರಮ ಸೂಚಿಸಿದರು.

    ಪ್ರಾರಂಭ ಹಂತದಲ್ಲಿರುವ ಸುರಳಿಪುಚಿ, ರಸಹೀರುವ ಕೀಟ ಬಾಧೆ ಮತ್ತು ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ 10 ಲೀಟರ್ ನೀರಿಗೆ 10 ಎಂಎಲ್ ಥಯಾಮಿಥಾಕ್ಸೆಮ್ ಮತ್ತು ಲಾಂಬ್ಡಾಸೈಥಾಲೋಥ್ರಾನ್ ದ್ರಾವಣ ಸಿಂಪಡಿಸಬೇಕು. ಅಲ್ಲದೆ, ಹಳದಿ ನಂಜಾಣು ಕೀಟ ಬಾಧೆ ಆವರಿಸಿದ ಬೆಳೆಯನ್ನು ಕಿತ್ತು ಭೂಮಿಯಲ್ಲಿ ಹೂಳುವ ಮೂಲಕ ರೋಗ ನಿಯಂತ್ರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂರ್ಪಸಲು ತಿಳಿಸಿದರು.

    ರೈತರು ಬೀಜ, ಗೊಬ್ಬರ, ಉಳುಮೆ, ಬಿತ್ತನೆ ಸೇರಿ ಪ್ರತಿ ಎಕರೆಗೆ 6-8 ಸಾವಿರ ರೂ. ಖರ್ಚು ಮಾಡಿದ್ದಾರೆ. ಈ ಬಾರಿ ಸರ್ಕಾರ ಹೆಸರಿಗೆ 7 ಸಾವಿರದಷ್ಟು ಬೆಂಬಲ ಬೆಲೆ ಘೊಷಣೆ ಮಾಡಿದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ಆಸರೆಯಾದೀತು ಎಂದು ನಂಬಿದ್ದೆವು. ಆದರೆ, ಇದೀಗ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಿ ಉತ್ತಮ ಇಳುವರಿ ತೆಗೆಯುವುದು ಸಾಧ್ಯವೇ ಎನ್ನುವ ಚಿಂತೆ ಕಾಡುತ್ತಿದೆ.

    | ಬಸವರಾಜ ಮೆಣಸಿನಕಾಯಿ, ಲಕ್ಷ್ಮೇಶ್ವರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts