More

    ಕರ್ನಾಟಕದ ಹೆಮ್ಮೆ ಡಾ. ಬಿ.ಎಫ್. ದಂಡಿನ

    ಗದಗ: ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ, ಹಿಂದುಳಿದ ಜನಾಂಗದ ಕಣ್ಮಣಿ ಡಾ. ಬಿ.ಎಫ್. ದಂಡಿನ ಅವರು ಕರ್ನಾಟಕದ ಹೆಮ್ಮೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.

    ಗಜೇಂದ್ರಗಡ ತಾಲೂಕಿನ ದ್ಯಾಮಣಸಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಬಿ.ಎಫ್. ದಂಡಿನ ಅವರ 88ನೇ ಜನ್ಮದಿನ ಮತ್ತು ಸಿದ್ದು ಯಾಪಲಪರವಿ ಅವರು ಬರೆದ ಜೀವನ ಚರಿತ್ರೆ ದಣಿವರಿಯದ ದಾರಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಎಂಬತ್ತರ ಗಡಿ ದಾಟಿರುವ ಡಾ. ದಂಡಿನ ಅವರಿಗೆ ಅನೇಕ ಪುರಸ್ಕಾರಗಳು ಲಭಿಸಿವೆ. ಪದ್ಮ ಪುರಸ್ಕಾರ ಕೂಡ ಲಭಿಸುವಂತಾಗಲಿ ಎಂದರು. ಪ್ರೊ. ಅನಿಲ ವೈದ್ಯ ಅವರು ಕೃತಿ ಪರಿಚಯ ಮಾಡಿದರು. ಕೃತಿ ರಚಿಸಿದ ಪ್ರೊ. ಸಿದ್ದು ಯಾಪಲಪರವಿ ಮಾತನಾಡಿ, ಡಾ. ದಂಡಿನ ಅವರ ವ್ಯಕ್ತಿತ್ವದ ಪ್ರಭಾವದಿಂದ ದ್ಯಾಮಣಸಿ ಗ್ರಾಮವನ್ನು ಇಡೀ ನಾಡು ಗೌರವಿಸುವಂತಾಗಿದೆ ಎಂದರು. ರವಿ ದಂಡಿನ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ದ್ಯಾಮಣಸಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಕನಸಿಗೆ ಈ ಭಾಗದ ಜನತೆ ಕೈ ಜೋಡಿಸಿ ಆಶೀರ್ವದಿಸಬೇಕು ಎಂದರು. ಶಕುಂತಲಾಬಾಯಿ ದಂಡಿನ, ಪ್ರಾಚಾರ್ಯ ಡಾ.ಡಿ.ಬಿ. ಗವಾನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts