More

    ಹೆಬ್ಬಾಳು ವಿರಕ್ತಮಠದಲ್ಲಿ 25, 26 ರಂದು ರೈತಪರ ವಿಚಾರಗಳ ಚರ್ಚೆ-ಕಾರ್ಯಾಗಾರ

    ದಾವಣಗೆರೆ: ಭಾರತೀಯ ಕಿಸಾನ್ ಸಂಘ ಹಾಗೂ ಸಾವಯವ ಕೃಷಿಕರ ಬಳಗದಿಂದ, ತಾಲೂಕಿನ ಹೆಬ್ಬಾಳು ಗ್ರಾಮದ ವಿರಕ್ತಮಠದಲ್ಲಿ ಜೂ.25 ಮತ್ತು 26 ರಂದು ಸಾವಯವ ಕೃಷಿ, ರೈತರ ವಿಚಾರಗಳ ಕುರಿತ ಸಂವಾದ, ಕಾರ್ಯಾಗಾರ ನಡೆಯಲಿವೆ.
    ಜೂ.25 ರ ಸಂಜೆ 6 ಗಂಟೆಗೆ ಜಲ ಮರುಪೂರಣ ಹಾಗೂ ಮಳೆನೀರು ಕೊಯ್ದು ಕಾರ್ಯಾಗಾರ ನಡೆಯಲಿದ್ದು, ಅಂತರ್ಜಲ ತಜ್ಞ ದೇವರಾಜ ರೆಡ್ಡಿ ಹಾಗೂ ಪ್ರಭು ಸ್ವದೇಶಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ದಾವಣಗೆರೆ ತಾಲೂಕು ಕಾರ್ಯದರ್ಶಿ ನೇರ‌್ಲಿಗೆ ಪ್ರಕಾಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜೂ.26 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಗೋ ಆಧಾರಿತ ಮತ್ತು ಸಾವಯವ ಕೃಷಿಯಿಂದ ರೈತರ ಅಭಿವೃದ್ಧಿ, ಪಂಚ ಮಹಾಭೂತಗಳ ಅರಿವು ಹಾಗೂ ರೈತರೊಂದಿಗೆ ಸಂವಾದ ಆಯೋಜಿಸಲಾಗಿದೆ.
    ಕೊಲ್ಲಾಪುರ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಹಾಗೂ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆಹಾರ ಆರೋಗ್ಯ ತಜ್ಞ ಶ್ರೀಶೈಲ ಬಾದಾಮಿ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಉಚಿತ ಗೋಕೃಪಾಮೃತ ವಿತರಿಸಲಾಗುವುದು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸುಮಾರು 1500 ಜನ ರೈತರು ಭಾಗವಹಿಸಲಿದ್ದಾರೆ. ದೂರದ ಊರುಗಳಿಂದ ಬರುವ ರೈತರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಇರಲಿದೆ. ಆಸಕ್ತ ರೈತರು ಎರಡು ದಿನ ಮುಂಚಿತವಾಗಿ ಮೊ.ಸಂ.99864-51541, 99726-03649 ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಕೋರಿದರು.
    ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕಾರ್ಯದರ್ಶಿ ಧನಂಜಯ್, ಮಾಜಿ ಉಪಾಧ್ಯಕ್ಷ ಕೆ.ವೆಂಕಟೇಶ್ವರರಾವ್, ಜಿ.ಪಿ.ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts