More

    ಹೆದ್ದಾರಿ ಬದಿ ಕಸದ ರಾಶಿ

    ಕೋಲಾರ: ತ್ಯಾಜ್ಯ ಸಂಗ್ರಹ, ವಿಲೇವಾರಿಯಲ್ಲಿ ನಗರಸಭೆ ವಿಲವಾಗಿದ್ದು, ರಸ್ತೆ, ವೃತ್ತ, ಖಾಲಿ ನಿವೇಶನಗಳಲ್ಲಿ ಕಸ ಚೆಲ್ಲುತ್ತಿದ್ದ ಜನ ಹೆದ್ದಾರಿಯನ್ನೂ ಬಿಡುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವಂತಾಗುವ ಜತೆಗೆ ನಗರದ ಮಾನ ಹೊರ ರಾಜ್ಯಗಳಲ್ಲೂ ಹರಾಜಾಗುವಂತೆ ಆಗಿದೆ.

    ಬೆಂಗಳೂರು, ಚೆನ್ನೆ$, ತಿರುಪತಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಖ್ಯೆ 75 ನಗರದ ಹೊರವಲಯದಲ್ಲಿ ಸಾಗುತ್ತದೆ. ಹೆದ್ದಾರಿ ಆಸುಪಾಸು ಮತ್ತು ಸರ್ವೀಸ್​ ರಸ್ತೆ ಬದಿಯಲ್ಲಿ ಅನಾಯಾಸವಾಗಿ ಕೆಲವರು ದುರ್ವಾಸನೆ ಬೀರುವ ಕಸ ತಂದು ಸುರಿದು ಹೋಗುತ್ತಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗ ್ಲೆ$ಓವರ್​ ಪಕ್ಕದ ಸರ್ವೀಸ್​ ರಸ್ತೆಗಳ ಬದಿಗೆ ರಾತ್ರಿ ವೇಳೆ ಕಸಾಯಿ ಖಾನೆ, ಚಿಕನ್​, ಮಟನ್​ ಅಂಗಡಿಗಳು, ಕಲ್ಯಾಣ ಮಂಟಪಗಳು, ಹಳೇ ಮನೆಗಳ ತ್ಯಾಜ್ಯ ಸೇರಿ ಇತರ ಅಂಗಡಿಗಳ ಘನ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.

    ನಗರದಲ್ಲಿ ರಸ್ತೆಗಳ ಮೇಲೆ ರಾಶಿ ರಾಶಿ ಕಸ ಇದ್ದರೂ ತಲೆ ಕೆಡಿಸಿಕೊಳ್ಳದ ನಗರಸಭೆ ಆಡಳಿತ, ಹೆದ್ದಾರಿ ಬದಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆಯೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಅಷ್ಟರ ಮಟ್ಟಿಗೆ ನಗರದ ಆಡಳಿತ ಚುಕ್ಕಾಣಿ ಹಿಡಿದವರು ರ್ನಿಲಕ್ಷ$್ಯ ಧೋರಣೆ ಅನುಸರಿಸುತ್ತಿದ್ದಾರೆ.

    ನಗರದಲ್ಲಿ ಸಾರ್ವಜನಿಕರು ಒಣ ಮತ್ತು ಹಸಿ ಕಸ ಪ್ರತ್ಯೇಕಿಸಿ ನಗರಸಭೆ ವಾಹನಗಳಿಗೆ ಕೊಡುವ ರೂಢಿ ಇಲ್ಲ. ಮನೆಯ ಕಸವನ್ನು ನಿಷೇಧಿತ ಪ್ಲಾಸ್ಟಿಕ್​ ಕವರ್​ಗೆ ಹಾಕಿ ರಸ್ತೆ ಬದಿ, ಹಳೆಯ ನಿವೇಶನ, ಗಲ್ಲಿ, ಚರಂಡಿಗಳ ಮೇಲೆ ಎಸೆಯುತ್ತಾರೆ. 15ರಿಂದ 20 ದಿನ ರಾಶಿ ಸಂಗ್ರಹವಾದ ನಂತರ ನಗರಸಭೆ ವಾಹನ ಬಂದು ಕಸ ತುಂಬಿಸಿಕೊಂಡು ಹೋಗುತ್ತದೆ. ವಾಹನ ಸಂಚಾರಕ್ಕೆ ಅಡಚಣೆ, ಅಪಘಾತಗಳಾದರೂ ನಗರಸಭೆ ಕ್ಯಾರೇ ಎನ್ನುತ್ತಿಲ್ಲ.

    ಇನ್ನು ಹೆದ್ದಾರಿ ಬದಿ ಹಾಕುವ ಕಸಕ್ಕೆ ಆಗಾಗ ಬೆಂಕಿ ಹಾಕಲಾಗುತ್ತದೆ. ಅನಾಮಿಕರು ಲೊಡುಗಟ್ಟಲೆ ಪ್ಲಾಸ್ಟಿಕ್​, ಥಮೋರ್ಕೋಲ್​ ಶೀಟ್​, ಸೋಫಾಸೆಟ್​ಗಳ ತ್ಯಾಜ್ಯ ತಂದು ಹಾಕಿ ಬೆಂಕಿ ಹಾಕಿ ಹೋಗುತ್ತಿದ್ದಾರೆ. ಇದರಿಂದ ದುರ್ವಾಸನೆ ಮಾತ್ರವಲ್ಲ ಗಾಳಿಯೂ ಕಲುಷಿತವಾಗುತ್ತಿದೆ. ಕಸ ಕೊಳೆತು ನಾರುತ್ತಿದ್ದು, ಸೊಳ್ಳೆ ಮತ್ತು ನೊಣ ಮುತ್ತಿಕೊಂಡು ಸಂತತಿ ಹೆಚ್ಚಿಸಿಕೊಳ್ಳುತ್ತಿವೆ. ಹೆದ್ದಾರಿ ಆಸುಪಾಸಿನ ಹಾರೋಹಳ್ಳಿ, ತೋಟದ ಮನೆ, ಪೇಟೆಚಾಮನಹಳ್ಳಿ, ಕೆಇಬಿ, ಹೌಸಿಂಗ್​ ಬೋರ್ಡ್​ ಕ್ವಾರ್ಟಸ್​ ಮತ್ತಿತರೆಡೆ ನಾಗರಿಕರು ಸೊಳ್ಳೆ ಕಾಟದಿಂದ ತತ್ತರಿಸಿ ಹೋಗುವಂತಾಗಿದೆ.

    ಸಿಸಿ ಕ್ಯಾಮರಾ: ಕಸ ವಿಂಗಡಿಸಿ ಪೌರಕಾರ್ಮಿಕರು ತರುವ ವಾಹನಕ್ಕೆ ನೀಡಬೇಕು ಎಂಬುದು ನಿಯಮ. ಆದರೆ ನಗರವಾಸಿಗಳು ನಿಷೇಧಿತ ಪ್ಲಾಸ್ಟಿಕ್​ ಕವರ್​ಗಳಲ್ಲಿ ಕಸ ತುಂಬಿಸಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪೌರಕಾರ್ಮಿಕರು, ಸಿಬ್ಬಂದಿ ಅಥವಾ ಜನಪ್ರತಿನಿಧಿಗಳು ಇದನ್ನು ಪ್ರಶ್ನಿಸಿದ ಉದಾಹರಣೆ ಇಲ್ಲ. ನಗರಸಭೆ ಡಾರ್ಕ್​ಸರ್ಕಲ್​ ಎಂದು ಗುರುತಿಸಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಕಸ ಎಸೆದವರನ್ನು ಶಿಕ್ಷಿಸುವ ಕೆಲಸಕ್ಕೆ ಮುಂದಾಗಿದ್ದರೆ ಜನಜಾಗೃತಿ ಜತೆಗೆ ಭಯ ಮೂಡಿ ಎಲ್ಲೆಂದರಲ್ಲಿ ಕಸಹಾಕುವ ಪ್ರವೃತ್ತಿ ನಿಲ್ಲುತ್ತಿತ್ತು.

    ಹೆದ್ದಾರಿ ಬದಿ ಕಸ ಹಾಕದಂತೆ ಕ್ರಮ ಜರುಗಿಸಲು ನಗರಸಭೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕೆಂದಟ್ಟಿ ಬಳಿ ಕಸ ಸಂಗ್ರಹ ಮತ್ತು ವಿಂಗಡಣೆಗೆ ಗುರುತಿಸಿರುವ 9.36 ಎಕರೆ ಜಾಗದಲ್ಲಿ ಘಟಕ ನಿಮಾರ್ಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಕಾಂಪೌಂಡ್​ ನಿಮಾರ್ಣವಾಗುತ್ತಿದ್ದು, ಘಟಕ ಕಾರ್ಯಾರಂಭವಾದರೆೆ ಸಮಸ್ಯೆ ಬಗೆಹರಿಯುತ್ತದೆ.
    ಪ್ರಸಾದ್​, ಪೌರಾಯುಕ್ತ, ನಗರಸಭೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts