More

    ಹೆಣ್ಣು ಪುರುಷನಷ್ಟೇ ಪ್ರಬಲ

    ಶ್ರೀರಂಗಪಟ್ಟಣ: ಹೆಣ್ಣಿಗೆ ಪೂಜನೀಯ ಸ್ಥಾನ ನೀಡಿ ಗೌರವಿಸುವ ಕುಟುಂಬ ಸದಾ ಯಶಸ್ಸಿನ ಮಾರ್ಗದಲ್ಲಿರುತ್ತದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

    ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣಮಂಟಪದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸುವುದನ್ನು ಕಲಿಯಬೇಕು. ಪ್ರಸ್ತುತ ದಿನಗಳಲ್ಲಿ ಹೆಣ್ಣು ಪುರುಷನಷ್ಟೇ ಪ್ರಬಲಳಾಗಿದ್ದು, ತನ್ನ ಕಾರ್ಯವೈಖರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾಳೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೊಂದ ಹಾಗೂ ಬಡ ಕುಟುಂಬದ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ನೀಡಿ ಇಂದು ಅಸಕ್ತ ಮಹಿಳೆಯರು ತಮ್ಮನ್ನು ನಿರ್ವಹಿಸುವಷ್ಟು ಶಕ್ತರನ್ನಾಗಿಸಿರುವುದು ಅದ್ಭುತ ಬೆಳವಣಿಗೆ ಎಂದರು.

    ಬಿಜೆಪಿ ಮುಖಂಡ ಎಸ್. ಸಚ್ಚಿದಾನಂದ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಮಾತೃ ಸ್ವರೂಪಿ ಹೇಮಾವತಿ ದಂಪತಿ ಸಾಕ್ಷತ್ ಶಿವಪಾರ್ವತಿಯಂತೆ ಪ್ರತ್ಯಕ್ಷವಾಗಿ ಶ್ರೀಮಂಜುನಾಥನ ಆಶೀರ್ವಾದ ನೀಡುತ್ತಿದ್ದಾರೆ. ಇಂತಹ ಮಹನೀಯರನ್ನು ಬಿಜೆಪಿ ಚಿಂತಕರ ಚಾವಡಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕಗೊಳಿಸಿರುವುದು ದೇಶ ಹಾಗೂ ರಾಜ್ಯಕ್ಕೆ ಗೌರವದ ಜತೆಗೆ ಹೆಮ್ಮೆಯ ಸಂಕೇತ. ಮುಂದಿನ ದಿನಗಳಲ್ಲಿ ಈ ಮಹನೀಯರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

    ವೇದಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲೆತ್ತಾಯ, ಕ್ಷೇತ್ರದ ಯೋಜನಾಧಿಕಾರಿ ಗಣಪತಿ ಭಟ್, ಹಿರಿಯ ವಕೀಲ ಎಂ.ಪುಟ್ಟೇಗೌಡ, ಪುಟ್ಟೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ನರಸಿಂಹೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಎಸ್.ಪ್ರಕಾಶ್, ಎಸ್.ಟಿ.ರಾಜು, ಗಂಜಾಂ ಶಿವು, ಎಸ್. ನಂದೀಶ್, ಚೈತ್ರಾ, ಪೂರ್ಣಿಮಾ, ನಿಮಿಷಾಂಬ ದೇವಾಲದ ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts