More

    ಹೆಜ್ಜೆ-ಗೆಜ್ಜೆಗಳ ಸಮ್ಮಿಲನಕ್ಕೆ ಪುಳಕ

    ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾ ಸುಜಯ ಸಹಭಾಗಿತ್ವದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ‘ನೃತ್ಯ ಸುಂದರ ವಸುಂಧರ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಹೆಜ್ಜೆ-ಗೆಜ್ಜೆಗಳ ಸಮ್ಮಿಲನವಾಯಿತು. ಇದರಿಂದ ನೆರೆದಿದ್ದ ನೃತ್ಯ ಪ್ರಿಯರೆಲ್ಲ ಪುಳಕಗೊಂಡರು.

    ‘ಆಡಿಸಿದಳು ಯಶೋಧೆ ಜಗದೋದ್ಧಾರನಾ’, ‘ತಂಬೂರಿ ಮೀಟಿದವ-ಭವಾಬ್ದಿ ದಾಟಿದವ’ ಸೇರಿದಂತೆ ವಿವಿಧ ಹಾಡುಗಳಿಗೆ ಮಾಡಿದ ನೃತ್ಯ, ಗಂಗಾಗಮನ ಹಾಗೂ ವಿದ್ಯುನ್ಮದನಿಕಾ’ ನೃತ್ಯರೂಪಕ ಜನಮನ ಸೂರೆಗೊಂಡಿತು. ಕಲಾ ಸುಜಯ ಮುಖ್ಯಸ್ಥ ವಿದ್ವಾನ್ ಸುಜಯ ಶಾನಭಾಗ ಹಾಗೂ ಡಾ. ವಸುಂಧರಾ ದೊರೆಸ್ವಾಮಿ ಅವರ ತಂಡ ಪ್ರತಿ ಹಾಡಿಗೂ ನೃತ್ಯ ಮಾಡಿ, ಜನರನ್ನು ಭಾವಪರವಶಗೊಳಿಸಿತು.

    ಉದ್ಘಾಟನೆ: ರಾಷ್ಟ್ರೀಯ ನೃತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ, ಗಂಧರ್ವ ಲೋಕವೇ ಧರೆಗಿಳಿದಿತ್ತು. ತಾಳ, ಲಯ, ಗೆಜ್ಜೆಗಳಿಗೆ ಮನ ಸೋತಿತು. ಸುಜಯ ಶಾನಭಾಗ ಹಾಗೂ ಡಾ. ವಸುಂಧರಾ ದೊರೆಸ್ವಾಮಿ ಅವರ ನೃತ್ಯರೂಪಕ ನನ್ನ ಸೆರೆಹಿಡಿಯಿತು ಎಂದು ಬಣ್ಣಿಸಿದರು.

    ಡಾ. ವಸುಂಧರಾ ದೊರೆಸ್ವಾಮಿ ಅವರು ಶಿಷ್ಯೋತ್ತಮ ಸುಜಯ ಶಾನಭಾಗ ಅವರಿಗೆ ಕೈ ಕಡಗ ತೊಡಿಸಿದರು. ಬಹಳಷ್ಟು ಶಿಷ್ಯರು ನನ್ನ ಬಳಿ ನೃತ್ಯ ಕಲಿಯಲು ಬರುತ್ತಿದ್ದರು. ಆದರೆ, ಸುಜಯ ನೃತ್ಯ ಕಲಿತು ನನ್ನ ಹೆಸರು ವಿಖ್ಯಾತಗೊಳಿಸಿದರು. ಅವರು ನನ್ನ ಮಾನಸ ಪುತ್ರರು ಎಂದಾಗ, ಸುಜಯ ಶಾನಭಾಗ ಅವರ ಕಣ್ಣಾಲಿಗಳು ತೇವಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts