More

    ಹೃದಯ ಶ್ರೀಮಂತಿಕೆಯೇ ನಿಜ ಸಂಪತ್ತು

    ಮಾಂಜರಿ, ಬೆಳಗಾವಿ: ಮನುಷ್ಯ ಶ್ರೀಮಂತಿಕೆ, ಸಂಪತ್ತಿನ ಬೆನ್ನು ಬೀಳದೆ ಹೃದಯ ಶ್ರೀಮಂತಿಕೆಯಿಂದ ಬದುಕಿ ಸಾಮಾನ್ಯರಿಗೆ ಆಧಾರವಾಗಿ ಬದುಕಿದರೆ ಅದು ನಿಜವಾದ ಮಾನವ ಧರ್ಮ. ಮಾನವ ಹುಟ್ಟುವಾಗಲೇ ಸಮಾಜದ ಋಣಿಯಾಗಿರುತ್ತಾನೆ. ಆ ಋಣ ತೀರಿಸಲು ಸಮಾಜದ ಏಳಿಗೆಗಾಗಿ ಶ್ರಮಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

    ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಗೆಣ್ಣವರ ಜನರ ಜೀವನ ಸುಧಾರಿಸಲು ಅನೇಕ ಉದ್ಯಮ ಸ್ಥಾಪಿಸಿದ್ದಾರೆ. ತಮ್ಮ ಜೀವನದುದ್ದಕ್ಕೂ ಜನಪರ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ ಎಂದರು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಪ್ರಾಮಾಣಿಕತೆಯಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಿರುವುದು ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದರು.

    ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸಹಕಾರಿ ರಂಗದಲ್ಲಿ ಕಲ್ಲಪ್ಪಣ್ಣ ಅವರು ಸ್ಥಾಪಿಸಿರುವ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆ ಮತ್ತು ಶಿರಗುಪ್ಪಿ ಶುಗರ್ಸ್‌ ಸಮಾಜದ ಅನೇಕ ಕುಟುಂಬಗಳ ಜೀವನ ಸಾಗಿಸಲು ನೆರವಾಗಿದೆ ಎಂದರು. ಜೈನಮಠದ ಸೋಂದಾ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಕೊಲ್ಲಾಪುರದ ಲಕ್ಷ್ಮೀಸೇನ ಪಟ್ಟಾಚಾರ್ಯ ಸ್ವಾಮೀಜಿ, ಸಂಸ್ಥಾನ ಮಠ ನಾಂದನಿಯ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಸ್ವಾಮೀಜಿ, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಶೇಗುಣಸಿ ವಿರಕ್ತಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಶಾಸಕರಾದ ರಾಜೇಂದ್ರ ಪಾಟೀಲ ಯಡ್ರಾವಕರ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮೋಹನ ಷಾ, ಸುಭಾಷ ಜೋಶಿ, ರಾವಸಾಹೇಬ ಪಾಟೀಲ,
    ಡಾ. ಎನ್.ಎ.ಮಗದುಮ್ಮ, ಡಿ.ಸಿ.ಸದಲಗಿ, ಅಭಯಕುಮಾರ ಅಕಿವಾಟೆ, ಎಸ್.ಟಿ.ಮುನ್ನೊಳ್ಳಿ, ಅಣ್ಣಾಸಾಹೇಬ ಪಾಟೀಲ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಭರತೇಶ ಬನವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕ ಅಜಿತ ದೇಸಾಯಿ, ಮಲ್ಲಪ್ಪ ಮೈಶಾಳೆ, ತಾತ್ಯಾಸಾಹೇಬ ಕಾಟೆ, ಮಹೇಶ ಭಾತೆ ಹಾಗೂ ಜಿಲ್ಲೆಯ ಕಲ್ಲಪ್ಪಣ್ಣ ಮಗ್ಗೆಣ್ಣವರ ಅಭಿಮಾನಿಗಳು ಇದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ.ಕೆಂಪಣ್ಣವರ ನಿರೂಪಿಸಿದರು. ವಿ.ಎಸ್.ಮಾಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts