More

    ಹೃದಯದ ಭಾಷೆಯಾಗಲಿ ಕನ್ನಡ

    ಹರಿಹರ: ಕನ್ನಡ ಕೇವಲ ಕಲಿಯುವ ಭಾಷೆಯಾಗದೆ ಅದು ನಮ್ಮ ಹೃದಯದ ಭಾಷೆಯಾಗಲಿ ಎಂದು ಇಲ್ಲಿನ ಆರೋಗ್ಯ ಮಾತೆ ಬಸಿಲಿಕಾ ಚರ್ಚ್‌ನ ಪ್ರಧಾನ ಗುರು ಕೆ.ಎ.ಜಾರ್ಜ್ ಹೇಳಿದರು.
    ನಗರದ ಮರಿಯಾ ನಿವಾಸ ಶಾಲೆಯಲ್ಲಿ ಶನಿವಾರ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಲಕ್ಷ್ಮೀಶ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವು ಭಾಷೆಗಳ ಜತೆ ಒಡನಾಟದಲ್ಲಿ ಇದ್ದರೂ, ಈ ನೆಲದ ಭಾಷೆ ಕನ್ನಡದ ಮಹತ್ವ ಅರಿಯಬೇಕಿದೆ ಎಂದರು.
    ದಾವಣಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಪತ್ರಕರ್ತ ಟಿ.ಇನಾಯತ್ ಉಲ್ಲಾ ಮಾತನಾಡಿ, ವಿದ್ಯಾರ್ಥಿಗಳು ಗಣಿತ, ವಿಜ್ಞಾನದ ವಿಷಯಕ್ಕೆ ಸೀಮಿತರಾಗದೆ ಸಾಹಿತ್ಯದ ಒಲವನ್ನೂ ಹೊಂದಬೇಕು. ಸಾಹಿತ್ಯಾಸಕ್ತಿ, ಸಾಹಿತ್ಯ ಅಧ್ಯಯನಕ್ಕೂ ಬದುಕು ಕಟ್ಟಿಕೊಡುವ ಶಕ್ತಿ ಇದೆ ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿದ್ದ ಮೇಘ ಮೈತ್ರಿ ಸಾಹಿತ್ಯ ಸಂಘದ ಅಧ್ಯಕ್ಷ ಎಂ.ರಮೇಶ್ ಕಮತಗಿ ಮಾತನಾಡಿ,ಸಾಹಿತ್ಯ ಸಂಭ್ರಮ ಕಾರ್ಯ ಕ್ರಮವನ್ನು ಇಡೀ ರಾಜ್ಯಾದ್ಯಂತ ನಡೆಸಲು ನಿಶ್ಚಿಯಿಸಲಾಗಿದೆ. ಮುನ್ನುಡಿಯಾಗಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಸಲಾಗುತ್ತಿದೆ ಎಂದರು.
    ಹರಿಹರದ ಕೋಟೆಯ ಶ್ರೀ ಲಕ್ಷ್ಮೀಶ ಕಲಾ ಸಂಘದ ಸುಜಾತಾ ಗೋಪಿನಾಥ ವಾಚಿಸಿ, ನಾಗಮಣಿಶಾಸ್ತ್ರಿ ವ್ಯಾಖ್ಯಾನಿಸಿದ 10ನೇ ತರಗತಿಯ ಹಳೆಗನ್ನಡ ಪಠ್ಯ ಭಾಗದ ಕುರಿತ ಗಮಕ ಶ್ರಾವಣ ಕಾರ್ಯಕ್ರಮ ಜನಮನ ಸೆಳೆಯಿತು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ಹೂಗಾರ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಫ್ರಾನ್ಸಿಸ್ ಕ್ಸೇವಿಯರ್, ಬಿ.ಮಗ್ದುಮ್, ಸಿಸ್ಟರ್ ಅಲಿನಾ ಮೇರಿ, ನಿರಂಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts