More

    ಹುಬ್ಬಳ್ಳಿ ಕಿಮ್ಸ್​ನಲ್ಲಿ ಸಚಿವರಿಂದ ಮಾಕ್ ಡ್ರಿಲ್

    ಹುಬ್ಬಳ್ಳಿ: ಕೆಲ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ಬಿಎಫ್ 7 ರೂಪಾಂತರಿ ವೈರಸ್​ನಿಂದ ಸ್ಥಳೀಯವಾಗಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಮಂಗಳವಾರ ಹುಬ್ಬಳ್ಳಿ ಕಿಮ್ಸ್​ನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು.

    ಕಿಮ್್ಸ ಆಸ್ಪತ್ರೆಯ ಹಳೇ ಕಟ್ಟಡ, ಸಿದ್ಧಪಡಿಸಿರುವ ಕೋವಿಡ್ ವಿಶೇಷ ವಾರ್ಡ್​ಗಳಿಗೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೆಲವು ದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್ ಹೊಸ ತಳಿಯಿಂದ ರಾಜ್ಯದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದರೆ, ಅವರಿಗೆಲ್ಲ ಉತ್ತಮ ಚಿಕಿತ್ಸೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಮಾಕ್​ಡ್ರಿಲ್ ನಡೆಸಲಾಗುತ್ತಿದೆ ಎಂದರು.

    ಹುಬ್ಬಳ್ಳಿ ಕಿಮ್ಸ್​ನಲ್ಲಿ 20 ಕಿಲೋ ಲೀಟರ್ ಸಾಮರ್ಥ್ಯದ 2 ಲಿಕ್ವಿಡ್ ಆಕ್ಸಿಜನ್ ಘಟಕಗಳಿವೆ. 200 ವೆಂಟಿಲೇಟರ್ ಬೆಡ್ ಇದೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕವಾಗಿ 50-60 ಹಾಸಿಗೆಗಳ ವಾರ್ಡ್ ಸಿದ್ಧ ಪಡಿಸಲಾಗಿದೆ. ಎಲ್ಲ ರೀತಿಯ ಔಷದಿ ದಾಸ್ತಾನು ಮಾಡಲಾಗಿದೆ. ರಾಜ್ಯದಲ್ಲಿ 8.5 ಲಕ್ಷ ಕೋವಿಡ್ ಪ್ರತಿರೋಧಕ ಲಸಿಕೆಗಳಿವೆ. ಇನ್ನು 20-25 ಲಕ್ಷ ಲಸಿಕೆಗಳನ್ನು ಕೇಂದ್ರ ಸರ್ಕಾರದಿಂದ ಕೇಳಲಿದ್ದೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts