More

    ‘ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ’

    ಹುಬ್ಬಳ್ಳಿ: ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವ ಸಲುವಾಗಿ ದೀಪಾವಳಿ ಪ್ರಯುಕ್ತ ಪ್ರತಿ ವರ್ಷದಂತೆ ಅ. 29ರಂದು ಸಂಜೆ 5ಕ್ಕೆ ಇಲ್ಲಿಯ ಮೂರುಸಾವಿರ ಮಠ ಮೈದಾನದಲ್ಲಿ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ರಾಜು ಜರತಾರಘರ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂಘಟನೆಯಿಂದ ಮೂರನೇ ಆಕಾಶ ಬುಟ್ಟಿ ಹಬ್ಬವಾಗಿದೆ. ಈ ಬಾರಿ ಒಂದು ಸಾವಿರ ಆಕಾಶ ಬುಟ್ಟಿಗಳನ್ನು ಸಂಘಟಕರ ಪರವಾಗಿ ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಕುಟುಂಬ ಸಮೇತ ಆಗಮಿಸಿ ಹಾರಿಸಬಹುದು ಎಂದು ಮನವಿ ಮಾಡಿದರು.

    ತರಹೇವಾರಿ ಆಕಾರ, ಬಣ್ಣದಲ್ಲಿ ತಯಾರಿಸಿದ ಆಕಾಶ ಬುಟ್ಟಿಗಳನ್ನು ತಂದು ಹಾರಿಸುವ ಸ್ಪರ್ಧಾಳುಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಮೊದಲ ಬಹುಮಾನ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನಗದು ನೀಡಲಾಗುತ್ತದೆ.

    ಈ ಸ್ಪರ್ಧೆ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಶ್ಲೋಕ ಪಠಣ, ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸುವ ಸಾರ್ವಜನಿಕರಿಗಾಗಿ ಉಚಿತ ಕೂಪನ್ ನೀಡಲಾಗುತ್ತಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿ ಡ್ರಾ ಕೂಡ ನಡೆಸಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಆಕಾಶ ಬುಟ್ಟಿ ಹಬ್ಬಕ್ಕೆ ಚಾಲನೆ ನೀಡುವರು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ದಲಬಂಜನ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಚಂದ್ರಶೇಖರ ಗೋಕಾಕ, ಸುಭಾಸಸಿಂಗ್ ಜಮಾದಾರ, ವಿನಾಯಕ ಲದವಾ ಗೋಷ್ಠಿಯಲ್ಲಿದ್ದರು.

    ==============

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts