More

    ಹುಬ್ಬಳ್ಳಿಯ ಘಟನೆ ಆಘಾತಕಾರಿ

    ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ಹಾಡುಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದ್ದು ಆರೋಪಿಯನ್ನು ಗಲ್ಲಿಗೇರಿಸುವಂತ ಕಠಿಣ ಶಿಕ್ಷೆಯಾಗಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಶುಕ್ರವಾರ ಸಂಜೆ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಗ್ರಾಮೀಣ ಬಾಗದ ಅಚನೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

    ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 43 ರಷ್ಟು ಹೆಚ್ಚಾಗಿವೆ, ಕರ್ನಾಟಕ ಬಿಹಾರ ಆಗುತ್ತಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಬೇರೆ ರಾಜ್ಯದಲ್ಲಿ ಹೆಣ್ಣುಮಕ್ಕಳನ್ನು ಹತ್ತಾರು ಬಾರಿ ಚುಚ್ಚಿ ಕೊಲ್ಲುವುದನ್ನು ಕೇಳಿದ್ದೆವು ಆದರೆ ಇದೇ ರೀತಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವು ಅತ್ಯಂತ ಆಘಾತ, ಸರಕಾರ ಎಸ್‌ಐಟಿ ಯಿಂದ ತನಿಖೆ ನಡೆಸಿ ಆರೋಪಿಗೆ ಗಲ್ಲಿಗೇರಿಸುವಂತ ಕಠಿಣ ಶಿಕ್ಷೆ ನೀಡಬೇಕು, ಲವ್ ಜಿಹಾದ್ ಎಂಬುದು ಮುಗ್ದ ಹಿಂದೂ ಹೆಣ್ಮಕ್ಕಳನ್ನು ವ್ಯವಸ್ಥಿತ ಜಾಲಕ್ಕೆ ಸಿಲುಕಿಸುವ ಭಯಾನಕ ವೂಹವಾಗಿದ್ದು ಇದನ್ನು ಮಟ್ಟ ಹಾಕಬೇಕಾಗಿದೆ ಎಂದರು.ಮತ್ತೊಮ್ಮೆ ಕೆಂದ್ರದಲ್ಲಿ ಮೋದಿಯವನ್ನು ಪ್ರಧಾನಿ ಮಾಡೋನ, ನಮ್ಮ ರಾಷ್ಟ್ರ ನಮ್ಮ ಹಿಂದುತ್ವವನ್ನು ಕಾಪಾಡಿಕೊಳ್ಳೊಣ ಎಂದರು.

    ಸಭೆಯಲ್ಲಿ ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಕಲ್ಮೇಶ ಗೌಡರ, ರಂಗಪ್ಪ ದಿಡ್ಡಿಮನಿ, ಸಿದ್ದಪ್ಪ ಹೂಗಾರ, ರಾಚಪ್ಪ ಕುಂಬಾರ, ಶಂಕ್ರಯ್ಯ ಹಿರೇಮಠ, ಚೇತನ ಕುರಿ, ಬಸವರಾಜ ಪಾಟೀಲ, ಉಮೇಶ ರೂಗಿ, ಶೇಖಪ್ಪ ಗಡೆದ, ಪಾರ್ವತಿ ಹುಗ್ಗಿ, ಮಾದೇವಪ್ಪ ಮಾದರ, ವಾಸು ಲಮಾಣಿ, ಸಂತೋಷ ಲಮಾಣಿ,ರಾಜು ಲಮಾಣಿ, ಮಲ್ಲಪ್ಪ ಕುಂಬಾರ, ಆರ,ಎಮ್ ಕಮತಗಿ, ಮಲ್ಲಪ್ಪ ಜಂಬಲದಿನ್ನಿ, ಮುದಕನ್ನ ಒಡೆಯರ, ಸಂಗಮೇಶ ಕೆಂಜೋಡಿ,ದುಂಡೇಶ ಕೊಣ್ಣುರ, ಮುದಕಣ್ಣ ಕೊಲ್ಹಾರ, ಗ್ಯಾನಪ್ಪ ಚಲುವಾದಿ, ಜಗದೀಶ ಸಜ್ಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.
    ಅಚನೂರ, ಸಂಗಾಪುರ, ಬಿಲ್ ಕೇರೂರ, ತಿಮ್ಮಾಪುರ, ಬಸವನಗರ ಎಲ್.ಟಿ. ರಾಂಪೂರ, ಬೋಡನಾಯಕದಿನ್ನಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts