More

    ಹುಬ್ಬಳ್ಳಿಯಲ್ಲಿ ಶತಕದತ್ತ ಪ್ಲಾಸ್ಮಾ ಥೆರಪಿ

    ಮರಿದೇವ ಹೂಗಾರ ಹುಬ್ಬಳ್ಳಿ

    ರಾಜ್ಯದಲ್ಲಿ ಪ್ರಥಮ ಪ್ಲಾಸ್ಮಾ ಥೆರಪಿ ನಡೆಸಿ, ಕರೊನಾ ರೋಗ ಗುಣಪಡಿಸುವಲ್ಲಿ ಯಶಸ್ಸು ಕಂಡಿದ್ದ ಇಲ್ಲಿನ ಕಿಮ್್ಸ, ಈಗ ಶತಕದ ಅಂಚಿನತ್ತ ದಾಪುಗಾಲಿಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಒಪ್ಪಿಗೆ ಪಡೆದು, ವೈದ್ಯರ ತಂಡ ರಚಿಸಿ ಸಾಕಷ್ಟು ಕಾಳಜಿಯಿಂದ ಮಾಡಿದ್ದ ಮೊದಲ ಚಿಕಿತ್ಸೆಯ ಯಶಸ್ಸಿನ ನಂತರ ಕಿಮ್ಸ್​ನ ಉತ್ಸಾಹ ಇಮ್ಮಡಿಸಿತ್ತು. ಅದೇ ವೇಳೆಗೆ ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದ್ದವು. ಕೆಲವು ಗಂಭೀರ ಸ್ವರೂಪದ ರೋಗಿಗಳನ್ನು ಗುಣಪಡಿಸಲು ಪ್ಲಾಸ್ಮಾ ಥೆರಪಿಯನ್ನೇ ಆಯ್ದುಕೊಳ್ಳಲು ವೈದ್ಯರ ತಂಡ ಮುಂದಾಯಿತು.

    ಕರೊನಾ ಸೋಂಕಿನಿಂದ ಗುಣವಾಗಿ ಮನೆಗೆ ಹೋದವರ ಮನವೊಲಿಸಿ ಪ್ಲಾಸ್ಮಾ ಪಡೆಯಲಾಯಿತು. ಆದರೆ ಈ ಕೆಲಸ ಸುಲಭದ್ದಾಗಿರಲಿಲ್ಲ. ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ರೂ. ಪ್ರೋತ್ಸಾಹಧನ ನೀಡಿಕೆಯನ್ನು ಸರ್ಕಾರ ಆರಂಭಿಸಿತು. ನಿಧಾನವಾಗಿ ಪ್ಲಾಸ್ಮಾ ದಾನದ ಜಾಗೃತಿಯೂ ಮೂಡತೊಡಗಿತ್ತು. ಕರೊನಾದಿಂದ ಗುಣವಾದವರು ಪ್ಲಾಸ್ಮಾ ನೀಡಲಾರಂಭಿಸಿದರು. ಪರಿಣಾಮವಾಗಿ ಒಟ್ಟು 50ಕ್ಕೂ ಹೆಚ್ಚು ಜನರಿಂದ ಪ್ಲಾಸ್ಮಾ ಪಡೆದು, ಇದುವರೆಗೆ 90 ಜನರಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿದೆ. ಪ್ಲಾಸ್ಮಾ ಥೆರಪಿಗೊಳಗಾಗಿದ್ದರೂ ಕೆಲವರು ಮೃತಪಟ್ಟಿದ್ದಾರೆ ಎಂದು ಕಿಮ್್ಸ ಮೂಲಗಳು ತಿಳಿಸಿವೆ.

    ಸೋಂಕು ದೃಢಪಟ್ಟು, ಗುಣಹೊಂದಿದ ವ್ಯಕ್ತಿಯಿಂದ 400 ಮಿಲಿ ಲೀಟರ್ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್ ಪ್ಲಾಸ್ಮಾ ನೀಡಲಾಗುತ್ತಿದೆ. ಈಗೀಗ ಸೋಂಕಿತರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ತೀವ್ರ ತರಹದ ಉಸಿರಾಟ ಅಥವಾ ಇತರೆ ಕಾಯಿಲೆ ಇದ್ದವರು ದಾಖಲಾದರೆ ಮಾತ್ರ ಥೆರಪಿಗೆ ಒಪ್ಪಿಗೆ ಪಡೆದು ನಡೆಸಲಾಗುತ್ತಿದೆ. ಇತ್ತೀಚೆಗೆ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಲು ಒಲವು ತೋರಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದಾಗ್ಯೂ ಕಿಮ್ಸ್​ನ ಮೆಡಿಸಿನ್ ವಿಭಾಗದ ಡಾ. ರಾಮ ಕೌಲಗುಡ್ಡ, ಪ್ಯಾಥಾಲಜಿ ವಿಭಾಗದ ಡಾ. ಪುರುಷೋತ್ತಮ ರೆಡ್ಡಿ, ಡಾ. ಕವಿತಾ ಏವೂರು ಮತ್ತಿತರರನ್ನು ಒಳಗೊಂಡ ತಂಡ 100 ಜನರಿಗೆ ಪ್ಲಾಸ್ಮಾ ಥೆರಪಿ ನಡೆಸಿ ಸೋಂಕಿನಿಂದ ಗುಣವಾಗಿಸಲು ಪಣ ತೊಟ್ಟಿದೆ. ಪ್ಲಾಸ್ಮಾ ಚಿಕಿತ್ಸೆಯಿಂದಲೇ ರೋಗಿಗಳು ಗುಣ ಹೊಂದುತ್ತಾರೆ ಎನ್ನುವುದನ್ನು ಐಸಿಎಂಆರ್ ಸ್ಪಷ್ಟಪಡಿಸಿಲ್ಲ. ಹೀಗಾಗಿ, ಪ್ಲಾಸ್ಮಾ ಚಿಕಿತ್ಸೆಯೊಂದಿಗೆ ಇತರ ಎಲ್ಲ ಉಪಚಾರಗಳನ್ನೂ ಮಾಡಲಾಗುತ್ತಿ್ತೆ ಎನ್ನುತ್ತಾರೆ ವೈದ್ಯರು.

    ವೈದ್ಯರೇ ಪ್ಲಾಸ್ಮಾ ಕೊಡುತ್ತಿದ್ದಾರೆ…
    ಮೊದಲು ಸೋಂಕಿನಿಂದ ಗುಣ ಹೊಂದಿದವರ ಪ್ಲಾಸ್ಮಾ ಪಡೆಯಲು ಮೆಡಿಸಿನ್ ವಿಭಾಗದ ಡಾ. ರಾಮ ಕೌಲಗುಡ್ಡ, ಡಾ. ಸಚಿನ್ ಹೊಸಕಟ್ಟಿ ನೇತೃತ್ವದಲ್ಲಿ ವೈದ್ಯರ ತಂಡವನ್ನೇ ರಚಿಸಲಾಗಿತ್ತು. ಜಪ್ಪಯ್ಯ ಅಂದರೂ ಪ್ಲಾಸ್ಮಾ ಕೊಡಲು ಯಾರೂ ಸಿದ್ಧರಿರಲಿಲ್ಲ. ಈಗೀಗ ಸೋಂಕಿನಿಂದ ಗುಣ ಹೊಂದಿದ ವೈದ್ಯರೇ ಪ್ಲಾಸ್ಮಾ ಕೊಡಲು ಮುಂದೆ ಬರುತ್ತಿರುವುದು ವಿಶೇಷ.

    ಪ್ಲಾಸ್ಮಾ ದಾನ ಮಾಡಿದವರಿಗೆ ಸರ್ಕಾರದ ಸಹಾಯ ಧನ ನೀಡಲಾಗುತ್ತಿದೆ. ಪ್ಲಾಸ್ಮಾ ಥೆರಪಿಗೊಳಗಾಗಿ ಗುಣವಾದವರ ಸಂಖ್ಯೆ ನೂರರ ಗಡಿ ಸಮೀಪ ಇದೆ. ನಮ್ಮ ವೈದ್ಯಕೀಯ ತಂಡದ ಸೇವಾತತ್ಪರತೆ ಅನನ್ಯ.
    | ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts