More

    ಹಿರಿಯರ ಜೀವನ ನಮಗೆ ಮಾರ್ಗದರ್ಶಿ

    ಅಥಣಿ: ಹಿರಿಯರು ಸಾಗಿ ಬಂದ ದಾರಿ ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ಇಲ್ಲಿನ ಶೆಟ್ಟರ ಮಠದಲ್ಲಿ ತಾಲೂಕು ಬಣಜಿಗ ಸಮುದಾಯದಿಂದ ಹಿರಿಯ ಮಾತೆಯರ ಅಮತ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಇಂದು ಬಹುತೇಕ ಮನೆಗಳಲ್ಲಿನ 70ವರ್ಷ ತುಂಬಿದ ಹಿರಿಯರು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸಾಮಾಜಿಕವಾಗಿ ಭದ್ರತೆಯಿಲ್ಲದಂತಾಗುತ್ತಿದೆ. ಮಕ್ಕಳು ಪಾಲಕರನ್ನು ನೋಡಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದರು.

    ತಾಲೂಕು ಬಣಜಿಗ ಸಮುದಾಯದ ಅಧ್ಯಕ್ಷ ಸಂಗಪ್ಪ ಉಣ್ಣಿ ಮಾತನಾಡಿದರು. ಅಮತ ಮಹೋತ್ಸವ ಆಚರಿಸಿಕೊಂಡ ಹಿರಿಯರನ್ನು ಸನ್ಮಾನಿಸಲಾಯಿತು. ರೇಖಾ ಮೆಣಸಿ, ಗಂಗವ್ವ ಮುತ್ತೂರ, ಗೌರವ ಅಧ್ಯಕ್ಷ ಶಂಕರ ಬುರ್ಲಿ, ಪದಾಧಿಕಾರಿಗಳಾದ ಮಹೇಶ ಚುನಮುರಿ, ಆನಂದ ಪಾಂಗಿ, ಅನವೀರ ಅನೆಪ್ಪನವರ, ಹಿರಿಯರಾದ ಅಲ್ಲಪ್ಪ ನಿಡೋಣಿ, ಮಹಾಂತೇಶ ಉಕ್ಕಲಿ, ರೇವಣಸಿದ್ದಪ್ಪ ಧೂಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts