More

    ಹಿರಿಯರು ಸಮಾಜಕ್ಕೆ ಅಮೂಲ್ಯ ರತ್ನವಿದ್ದಂತೆ

    ಯಾದಗಿರಿ: ಹಿರಿಯರಿಲ್ಲದ ಮನೆ ಇಲ್ಲ. ಗುರುವಿಲ್ಲದ ಮಠ ಇಲ್ಲ ಎನ್ನುವ ಗಾದೆಯಿಂದ ಹಿರಿಯರ ಮಹತ್ವ ತಿಳಿಯುತ್ತದೆ. ಹಿರಿಯ ಜೀವಿಗಳು ಸಮಾಜದ ಅಮೂಲ್ಯ ರತ್ನವಿದ್ದಂತೆ ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ ತಿಳಿಸಿದರು.


    ಗುರುವಾರ ಇಲ್ಲಿನ ಪೊಲೀಸ್ ಠಾಣೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೊಡ್ಡವರ ಶುಭ ಹಾರೈಕೆಯೆ ಕಿರಿಯರಿಗೆ ಶ್ರೀರಕ್ಷೆ ಮತ್ತು ಶಕ್ತಿಯಾಗಿದೆ. ಹಿರಿಯರ ಅನುಭವ ಸ್ಪೂತರ್ಿ, ಮಾರ್ಗದರ್ಶನ ಅವಶ್ಯವಾಗಿದೆ ಎಂದರು.
    ಗುರು-ಹಿರಿಯರ ಬಗ್ಗೆ ಪೂಜ್ಯನೀಯ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ಸಂಸ್ಕಾರವಂತರಾಗಬೇಕು. ಹಿರಿಯರ ಆಶೀವರ್ಾದ ಕಿರಿಯರ ಅಭ್ಯುದಯಕ್ಕೆ ಕಾರಣ ಎಂದು ತಿಳಿಸಿದರು

    ಪ್ರಧಾನ ಸಿವಿಲ್ ನ್ಯಾಯಾಧೀಶೆ ಶೋಭಾ ಮಾತನಾಡಿ, ಮಾನವೀಯತೆ ಮತ್ತು ಮನುಷ್ಯತ್ವದ ಕೊರತೆಯಿಂದ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಇಂದಿನ ಯುವ ಸಮುದಾಯ ತಂದೆ-ತಾಯಿಗಳನ್ನು ಮರಣದ ನಂತರ ಪೂಜಿಸುವ ಬದಲು ಬದುಕಿರುವಾಗಲೇ ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು. ಪಾಲಕರನ್ನು ಗೌರವದಿಂದ ಕಾಣುವ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಾನೆ ಎಂದು ಹೇಳಿದರು.


    ಹಿರಿಯ ನ್ಯಾಯವಾದಿ ಶ್ರೀನಿವಾಸ ಕುಲಕಣರ್ಿ, ಹಿರಿಯರ ಧೈರ್ಯ, ತಾಳ್ಮೆ, ಅವರು ಹೊಂದಿರುವ ಜವಾಬ್ದಾರಿಯ ಮೌಲ್ಯಗಳು ಯುವ ಪೀಳಿಗೆಗಿಂತ ಉತ್ತಮವಾಗಿವೆ. ಹಿರಿಯರ ಮಾರ್ಗದರ್ಶನದಲ್ಲಿ ಇರುವವರು ಎಂದಿಗೂ ಕೆಟ್ಟ ಅಭ್ಯಾಸಗಳನ್ನು ಕಲಿಯುವುದಿಲ್ಲ. ಪ್ರತಿಯೊಬ್ಬರು ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿತುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts