More

    ಹಿಂದು ಧರ್ಮದ ಉಪೇಕ್ಷೆ, ಅವಹೇಳನ ಸಲ್ಲದು; ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಹಿಂದುಗಳ ಧರ್ಮಾಭಿಮಾನ ಶೂನ; ಕಾವೇರಿ ರಾಯ್ಕರ್

    ಶಿಕಾರಿಪುರ: ನಾವು ಧರ್ಮ ಮಾರ್ಗದಿಂದ ವಿಮುಖರಾಗುತ್ತಿದ್ದೇವೆ. ನಮ್ಮ ಧರ್ಮವನ್ನು ನಾವೇ ಉಪೇಕ್ಷೆ ಮಾಡುವುದು, ಅವಹೇಳನ ಮಾಡುವುದು ಸರಿಯಲ್ಲ ಎಂದು ಹಿಂದು ಜನಜಾಗೃತಿ ಸಮಿತಿ ಸಂಚಾಲಕಿ ಕಾವೇರಿ ರಾಯ್ಕರ್ ಹೇಳಿದರು.
    ಭದ್ರಾಪುರ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದು ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಹಿಂದುಗಳಲ್ಲಿ ಧರ್ಮಾಭಿಮಾನ ಶೂನ್ಯವಾಗುತ್ತಿದೆ. ನಮ್ಮ ಧರ್ಮದ ಶ್ರೇಷ್ಠತೆ ತಿಳಿದು ಧರ್ಮಾಚರಣೆ ಮಾಡಬೇಕು. ಇದರಿಂದ ಸಾತ್ವಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
    ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿಲ್ಲ. ಮಕ್ಕಳಿಗೆ ಸಂಸ್ಕಾರ ನೀಡಬೇಕಿದ್ದ ನಮ್ಮ ಧರ್ಮಗ್ರಂಥಗಳ ಬಗ್ಗೆ ಇಂದು ನಮ್ಮ ಶಾಲೆಗಳಲ್ಲಿ ಕಲಿಸುವಂತಿಲ್ಲ. ಕಾರಣ ನಮ್ಮ ಭಾರತ ಜಾತ್ಯತೀತ ರಾಷ್ಟ್ರ. ಯುಗ ಯುಗಗಳಿಂದ ಹಿಂದು ರಾಷ್ಟ್ರವಾಗಿದ್ದ ಭಾರತವನ್ನು ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿರುವುದೇ ಇಂದು ಹಿಂದು ಸಮಾಜದ ಮೇಲೆ ಆಗುತ್ತಿರುವ ಎಲ್ಲ ಅನ್ಯಾಯಗಳಿಗೆ ಮೂಲ ಕಾರಣ ಎಂದು ಹೇಳಿದರು
    ಹಿಂದುಗಳು ನಮ್ಮ ಧರ್ಮಾಚರಣೆಯ ಭಾಗವಾದ ತಿಲಕ ಇಡಲು ಮತ್ತು ಸ್ತ್ರೀಯರು ದುಂಡನೆಯ ಕುಂಕುಮ ಇಡಲು ನಾಚಿಕೆ ಪಡುತ್ತಿದ್ದಾರೆ. ಅನ್ಯಮತೀಯರು ತಮ್ಮ ಪಂಥದಲ್ಲಿ ಹೇಳಿದ ಯಾವುದೇ ಆಚರಣೆಗಳನ್ನು ಪಾಲಿಸಲು ಹಿಂಜರಿಯುವುದೆ ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ ಹಿಂದುಗಳಿಗೆ ಮಾತ್ರ ನಮ್ಮ ಧರ್ಮದಲ್ಲಿ ಹೇಳಿರುವ ಆಚರಣೆಗಳು, ಮೂಢನಂಬಿಕೆಗಳಂತೆ ಕಾಣುತ್ತವೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಿ ಹಿಂದು ಧರ್ಮದ ಶ್ರೇಷ್ಠತೆಯನ್ನು ತಿಳಿಸಿ ಜಾಗೃತಿ ಪಡಿಸುವ ಕಾರ್ಯ ಆಗಬೇಕಾಗಿದೆ ಎಂದರು.
    ವಾಲ್ಮೀಕಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ವ್ಯಕ್ತಿಯ ಸರ್ವಾಂಗೀಣ ಉನ್ನತಿಗೆ ಧರ್ಮದ ಪರಿಪಾಲನೆ ಅತ್ಯಾವಶ್ಯಕ. ಹೀಗಾಗಿ ಪ್ರತಿಯೊಬ್ಬರೂ ಧರ್ಮದ ಮಹತ್ವವನ್ನು ಅರಿತು ಧರ್ಮದ ಪಾಲನೆಯನ್ನು ಮಾಡಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಿದೆ. ಮಾತೆಯರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ನೀಡಿ ಆದರ್ಶ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದರು.
    ಧರ್ಮಾಚರಣೆ ಮತ್ತು ಧರ್ಮ ಶಿಕ್ಷಣದ ಮಾಹಿತಿಯನ್ನು ನೀಡುವ ಗ್ರಂಥಗಳ ಪ್ರದರ್ಶನ, ಸಾತ್ವಿಕ ಉತ್ಪನ್ನಗಳ ಪ್ರದರ್ಶನ ಹಾಗೂ ರಾಷ್ಟ್ರ ರಕ್ಷಣೆ ಮತ್ತು ಧರ್ಮ ಶಿಕ್ಷಣದ ಮಾಹಿತಿ ನೀಡುವ ಫ್ಲೆಕ್ಸ್‌ಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts