More

    ಹಿಂದು ಕುಟುಂಬದಿಂದ ಗಣೇಶ, ಮೊಹರಂ ಹಬ್ಬ

    ಧಾರವಾಡ: ಇಲ್ಲಿಯ ಹಿಂದು ಕುಟುಂಬವೊಂದು ಗಣೇಶ, ಮೊಹರಂ ಹಬ್ಬದಾಚರಣೆಯ ಮೂಲಕ ಭಾವೈಕ್ಯ ಸಾರುತ್ತಿದೆ. ನಗರದ ಭೂಸಪ್ಪ ಚೌಕ್​ನ ಮೇದಾರ ಓಣಿಯ ಮುಧೋಳ ಕುಟುಂಬದವರು ಗಣೇಶ ಮೂರ್ತಿ ಹಾಗೂ ದಾವಲ್ ಮಲ್ಲಿಕ್ ಪಾಂಜಾ ಪ್ರತಿಷ್ಠಾಪಿಸಿ ಪೂಜೆಗೈಯುತ್ತಿದ್ದಾರೆ.

    ಮಹಾದೇವಪ್ಪ ಹಾಗೂ ನೀಲವ್ವ ದಂಪತಿ ಕಳೆದ 40 ವರ್ಷಗಳಿಂದ ಈ ವಿಶಿಷ್ಟ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ಈ ವರ್ಷ ಅವರ ಅನುಪಸ್ಥಿತಿಯಲ್ಲಿ ಮಕ್ಕಳಾದ ಸುಧೀರ ಮುಧೋಳ ಹಾಗೂ ಸಹೋದರರು ತಂದೆ- ತಾಯಿಯ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ನಿತ್ಯವೂ ಗಣೇಶನಿಗೆ ಪೂಜೆಗೈದು ಆರತಿ, ನೈವೇದ್ಯ ಅರ್ಪಿಸುತ್ತಾರೆ. ಪಾಂಜಾಗಳಿಗೆ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದಾರೆ. ಕೋಮು ಸೌಹಾರ್ದತೆ ಸಾರುವ ಈ ಆಚರಣೆ ತಿಳಿದು ಸಾರ್ವಜನಿಕರು ಮುಧೋಳ ಅವರ ಮನೆಗೆ ತೆರಳಿ ಭಕ್ತಿ ಸಮರ್ಪಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts