More

    ಹಿಂದುಗಳಿಗೆ ಪ್ರೇರಕ ಶಕ್ತಿ ಶಿವಾಜಿ ಮಹಾರಾಜರು

    ಗುತ್ತಲ: ಭಾರತದ ಎಲ್ಲ ಹಿಂದುಗಳಿಗೆ ಪ್ರೇರಕ ಶಕ್ತಿಗಳಲ್ಲಿ ಅಗ್ರಗಣ್ಯರೆಂದರೆ ಶಿವಾಜಿ ಮಹರಾಜರು ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಕಲ್ಮಠದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 393ನೇ, ಮಹಾರಾಣಾ ಪ್ರತಾಪ ಸಿಂಗ್, ಸಂತ ಸೇವಾಲಾಲರ ಹಾಗೂ ಸೂರ್ಯನಾರಾಯಣರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಹಿಂದುಗಳ ಮೇಲೆ ಮೊಘಲರ ದಾಳಿಯನ್ನು ಶಿವಾಜಿ ಮಹಾರಾಜರು ಸಮರ್ಥವಾಗಿ ಎದುರಿಸಿ ಅವರಿಗೆ ಸಿಂಹ ಸ್ವಪ್ನರಾಗಿದ್ದರು. ತಾಯಿ ಜೀಜಾಬಾಯಿ ಅವರ ಹೆಬ್ಬಯಕೆ ಈಡೇರಿಸಿ ಮರಾಠ ಹಿಂದು ರಾಜ್ಯವನ್ನು ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಶಿವಾಜಿ ಮಹಾರಾಜರು ತನ್ನ ಬಾಲ್ಯ ಹಾಗೂ ಯೌವನದಲ್ಲಿಯೇ ಹಿಂದು ಧರ್ಮದ ಸಂಘಟನೆಗೆ ಮೀಸಲಿಟ್ಟ ಪರಿಣಾಮ ಹಿಂದುಧರ್ಮ ಇಂದಿಗೂ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದರು.

    ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಜಯಂತಿಗಳು ಸ್ಮರಣೆಗೆ ಸಿಮೀತಗೊಳ್ಳದೆ ಅವರ ಜೀವನದ ಮೌಲ್ಯ, ತತ್ತ್ವಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಬಡವರು, ನಿರ್ಗತಿಕರನ್ನು ಮೇಲೆತ್ತುವ ಕಾರ್ಯ ಮಾಡಬೇಕು ಎಂದರು.

    ಇದಕ್ಕೂ ಮುನ್ನ ಹಿಂದು ಸಂಘಟನಾ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಮಹಾರಾಣಾ ಪ್ರತಾಪ, ಶಿವಾಜಿ ಮಹರಾಜ ಹಾಗೂ ಸಂತ ಸೇವಾಲಾರರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.

    ಮಾಜಿ ಸಚಿವ ರುದ್ರಪ್ಪ ಲಮಾಣಿ, ಹುಬ್ಬಳ್ಳಿ ಬಂಜಾರ ಪೀಠದ ತಿಪ್ಪೇಶ್ವರ ಸ್ವಾಮಿಜಿ, ರಾಜ್ಯ ಯುವ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಕೃಷ್ಣಸಾ ದಲಭಂಜನ್ ಮಾತನಾಡಿದರು. ಇದೇ ವೇಳೆ ಒಕ್ಕೂಟದ ವಿವಿಧ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.

    ರಾಜ್ಯ ಕ್ಷತ್ರಿಯ ಒಕ್ಕೂಟದ ಗುತ್ತಲ ಘಟಕ ಅಧ್ಯಕ್ಷ ಚನ್ನಪ್ಪ ಕಲಾಲ, ಉಪಾಧ್ಯಕ್ಷ ಅಶೋಕ ತೇಲ್ಕರ, ಯುವ ಘಟಕದ ಅಧ್ಯಕ್ಷ ರಮೇಶಸಿಂಗ್ ಜಮಾದಾರ, ಬಿಎಸ್​ಎಫ್ ಯೋಧ ಅಶೋಕ ಹಾವೇರಿ, ಒಕ್ಕೂಟದ ಶ್ರೀನಿವಾಸ ತೇಲ್ಕರ, ಪುಂಡಲೀಕ ಗೋಂದಳೆ, ಕೃಷ್ಣಾಜಿ. ತೇಲ್ಕರ, ನವೀನ ದಾಮೋದರ, ಪರಶುರಾಮ ಬಾಲಮ್ಮನವರ, ಹನುಮಂತಸಿಂಗ್, ಮಾಲತೇಶ ಆರೇರ, ಹಿಂದು ಜಾಗರಣ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

    ಬಂಜಾರ ಸಮಾಜದ ಅಧ್ಯಕ್ಷ ಈರಪ್ಪ ಲಮಾಣಿ ಸ್ವಾಗತಿಸಿದರು. ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ ಬೋರಾಪುರಿ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಪಿ.ಆರ್. ಪ್ರಾರ್ಥಿಸಿದರು. ಎಂ.ಬಿ. ಕೋಡಬಾಳ ಕಾರ್ಯಕ್ರಮ ನಿರೂಪಿಸಿದರು.

    ಪ್ರತಿಯೊಬ್ಬರೂ ಶಿವಾಜಿ, ರಾಣಾ ಪ್ರತಾಪ, ಸೇವಾಲಾಲರಂಥ ನಾಯಕರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸನಾತನ ಹಿಂದು ಧರ್ಮದ ಪರಂಪರೆ ಎತ್ತಿ ಹಿಡಿದ ರಾಜರ ಬಗ್ಗೆ ಶಾಲಾ ಪಠ್ಯದಲ್ಲಿ ಉಲ್ಲೇಖಿಸದೆ, ಭಾರತ ದೇಶದ ಮೇಲೆ ಆಕ್ರಮಣ ಮಾಡಿದ ಮೊಘಲರ, ಖಿಲ್ಜಿ, ತುಘಲಕ್​ರಂಥ ಅರಸರ ಬಗ್ಗೆ ಉಲ್ಲೇಖಿಸಿರುವುದು ವಿಪರ್ಯಾಸ.
    | ಗುರುಸಿದ್ಧ ಸ್ವಾಮೀಜಿ, ಕಲ್ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts