More

    ಹಾವೇರಿ ಜಿಪಂ ಅಧ್ಯಕ್ಷರಾಗಿ ಏಕನಾಥ ಆಯ್ಕೆ

    ಹಾವೇರಿ: ಬಸನಗೌಡ ದೇಸಾಯಿ ನಿಧನದಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ರಾಣೆಬೆನ್ನೂರ ತಾಲೂಕಿನ ಕಾಕೋಳ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರು ಏಕನಾಥ ಬಾನುವಳ್ಳಿ ಅವರ ಆಯ್ಕೆಯನ್ನು ಘೊಷಿಸಿದರು.

    ಉಪಚುನಾವಣಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಅವರು ಬೆಳಗ್ಗೆ 11ರಿಂದ 1ರವರೆಗೆ ಚುನಾವಣೆ ಪ್ರಕ್ರಿಯೆ ನಿರ್ವಹಿಸಿದರು. 34 ಸದಸ್ಯ ಬಲದ ಜಿಪಂನಲ್ಲಿ ಒಬ್ಬ ಸದಸ್ಯ ನಿಧನ ಹೊಂದಿದ ಕಾರಣ ಅಧ್ಯಕ್ಷರ ಆಯ್ಕೆಗಾಗಿ 17 ಸದಸ್ಯರ ಕೋರಂ ಅವಶ್ಯವಿತ್ತು. 23 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರ ಪುತ್ರ ರಾಘವೇಂದ್ರ ತಹಶೀಲ್ದಾರ್ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಕೊನೇ ಕ್ಷಣದಲ್ಲಿ ಅವರನ್ನು ಪಕ್ಷದ ವರಿಷ್ಠರು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

    ನೂತನ ಅಧ್ಯಕ್ಷ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವರು ಬಿಎ ಪದವೀಧರ ಹಾಗೂ ಕೃಷಿಕ. ರಾಣೆಬೆನ್ನೂರು ತಾಲೂಕಿನ ಗುಡಗೂರಿನಲ್ಲಿ ವಾಸವಾಗಿದ್ದಾರೆ. 1982ರಿಂದ 1987ರಲ್ಲಿ ರಾಣೆಬೆನ್ನೂರ ತಾಲೂಕಿನ ಹೊನ್ನತ್ತಿ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ 1992ರವರೆಗೆ ಕಾರ್ಯನಿರ್ವಹಿಸಿದ್ದಾರೆ. 1995ರ ಚುನಾವಣೆಯಲ್ಲಿ ಗುಡಗೂರ ಕ್ಷೇತ್ರದ ತಾಪಂ ಸದಸ್ಯರಾಗಿ ಆಯ್ಕೆಯಾದರು. 2000ದಿಂದ 2005ರವರೆಗೆ ರಾಣೆಬೆನ್ನೂರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಹಕಾರಿ ಸಂಘ ನಿಯಮಿತ ಸದಸ್ಯರು ಮತ್ತು ಅಧ್ಯಕ್ಷರಾಗಿ, 2005ರಿಂದ 2011ರವರೆಗೆ ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಅಧ್ಯಕ್ಷರಾಗಿ ಹಾಗೂ 2016ರಲ್ಲಿ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts