More

    ಹಾಲಕ್ಕಿ ಮಹಿಳೆ ಉಡುಪಿನಲ್ಲಿ ವಿದೇಶಿಯರು


    ಕಾರವಾರ: ಕುತ್ತಿಗೆ ತುಂಬ ಕರಿಮಣಿ ಸರ. ಕೈತುಂಬ ಗಾಜಿನ ಬಳೆ, ಹಸಿರು, ಕೆಂಪು ಪಟ್ಟೆ ಸೀರೆ ಉಡುವ ಹೆಂಗಳೆಯರು. ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರ ಈ ವಿಶಿಷ್ಟ ಉಡುಗೆ ಪದ್ಧತಿ ಈಗ ವಿದೇಶಿಗರನ್ನೂ ಸೆಳೆದಿದೆ. ಇಬ್ಬರು ವಿದೇಶಿ ಮಹಿಳೆಯರು ಅಂಕೋಲಾಕ್ಕೆ ಆಗಮಿಸಿ ಹಾಲಕ್ಕಿಗರ ಬಟ್ಟೆ ತೊಟ್ಟು, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರ ಜತೆ ಇದ್ದು, ಸಮುದಾಯದ ಸಂಸ್ಕೃತಿ ಅಧ್ಯಯನ ನಡೆಸಿ ತೆರಳಿದ್ದಾರೆ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಿಂದ ಹಾಲಕ್ಕಿ ಇಂಚರ ಎಂಬ ಜಾನಪದ ಸಂಸ್ಕೃತಿ ಅಧ್ಯಯನ ಶಿಬಿರವನ್ನು ಅಂಕೋಲಾ ಬಡಗೇರಿಯಲ್ಲಿ ಆಯೋಜಿಸಲಾಗಿತ್ತು. 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು 2 ದಿನ ಸುಕ್ರಿ ಬೊಮ್ಮ ಗೌಡ ಅವರ ಮನೆಯಲ್ಲಿ ನೆಲೆಸಿದ್ದರು. ಅದರಲ್ಲಿ ಜರ್ಮನಿಯ ಮ್ಯಾಕ್ಸಿಮಿಲನ್ ಸ್ಟೆರ್ಲಿಂಗ್ ಹಾಗೂ ಆಷ್ಟ್ರಿಯಾದ ವೆಲೇರಿಯಾ ಸ್ಟ್ರೊಬ್ಲ್ ಎಂಬ ಇಬ್ಬರು ಯುವತಿಯರು ಇವರೊಟ್ಟಿಗೆ ಆಗಮಿಸಿದ್ದರು. ಹಲವು ಹೆಣ್ಣು ಮಕ್ಕಳು ಹಾಲಕ್ಕಿ ಬಟ್ಟೆ ತೊಟ್ಟು ಆ ಸಮುದಾಯದ ಮಹಿಳೆಯರ ಜತೆ ಪುಗುಡಿ ನೃತ್ಯಕ್ಕೆ ಹೆಜ್ಜೆ ಹಾಕಿದರು. ಕುಚ್ಚಲಕ್ಕಿ ಗಂಜಿ ಉಂಡು ಸಂತಸಪಟ್ಟರು. ಹಬ್ಬ, ಮದುವೆ ಹೀಗೆ ಹಲವು ಆಚಾರಗಳನ್ನು ತಿಳಿದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts