More

    ಹಾಡಿ ಜನರ ಸಬಲೀಕರಣಕ್ಕೆ ಆದ್ಯತೆ ನೀಡಿ : ಧರ್ಮಸ್ಥಳ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಸಲಹೆ


    ಮೈಸೂರು : ಹಾಡಿ ಕಾಲನಿ ಅಭಿವೃದ್ಧಿಗೆ ಸ್ವಸಹಾಯ ಸಂಘ ರಚನೆ ಮಾಡುವ ಮೂಲಕ ಸಾಮಾಜಿಕ, ಆರ್ಥಿಕ, ಸಬಲೀಕರಣಕ್ಕೆ ಕಾರ್ಯಕರ್ತರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.

    ಎಚ್.ಡಿ. ಕೋಟೆ ಪಟ್ಟಣದ ಬಿಎಸ್‌ಆರ್ ಕಾಂಪ್ಲೆಕ್ಸ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾಲನಿ ಸಂಯೋಜಕರ ಸಭೆ ಹಾಗೂ ಸೇವಾ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


    ಯೋಜನೆ ವತಿಯಿಂದ ಇರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕು. ಹಾಡಿ ಕಾಲನಿಗಳಲ್ಲಿ ಸಂಘ ರಚನೆ, ಜ್ಞಾನವಿಕಾಸ ಕೇಂದ್ರಗಳ ರಚನೆ, ಕ್ಷೇತ್ರ, ಕೃಷಿ ಅಧ್ಯಯನ ಪ್ರವಾಸ, ಸ್ವ-ಉದ್ಯೋಗ, ಕೃಷಿ ತರಬೇತಿಗಳ ಮೂಲಕ ಜನರಿಗೆ ಯೋಜನೆಯ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.


    ಜನಮಂಗಳ ಕಾರ್ಯಕ್ರಮದಡಿ ಸಿಗುವ ಎಲ್ಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಹಾಡಿ ಜನರ ಆರೋಗ್ಯ ಕಾಪಾಡಬೇಕು. ಮಾಸಾಶನ ಮತ್ತು ವಾತ್ಸಲ್ಯ ಮನೆ ನಿರ್ಮಾಣ, ಮೂರು ತಿಂಗಳಿಗೊಮ್ಮೆ ಹಾಡಿ ಕಾಲನಿಗಳ ಸಂಯೋಜಕರ ಸಭೆ ಏರ್ಪಡಿಸಿ ಸಾಧಕ ಬಾಧಕಗಳ ಕುರಿತು ಚರ್ಚಿಸಬೇಕು ಎಂದು ತಿಳಿಸಿದರು.


    ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್ ಪ್ರಸ್ತಾವಿಕವಾಗಿ ಮಾತನಾಡಿ, ಹಾಡಿ ಕಾಲನಿಯ ಜನರ ಕುಟುಂಬ ಅಭಿವೃದ್ಧಿಗೆ ಯೋಜನೆಯು ಸ್ವ-ಸಹಾಯ ಸಂಘಗಳ ರಚನೆಯ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ. ಅಲ್ಲದೆ ಸುಜ್ಞಾನ ನಿಧಿ ಶಿಷ್ಯವೇತನ, ಜನಮಂಗಳ, ವಾತ್ಸಲ್ಯ, ಕೃಷಿ ತರಬೇತಿ, ಜ್ಞಾನವಿಕಾಸ ಕಾರ್ಯಕ್ರಮಗಳ ಪ್ರಯೋಜನವನ್ನು ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

    ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸದಸ್ಯರಾದ ಚಾ.ನಂಜುಂಡಮೂರ್ತಿ, ಕನ್ನಡ ಪ್ರಮೋದ, ಪ್ರಸನ್ನ, ವಿನಯ್ ಬಜರಂಗಿ, ಹಣಕಾಸು ಪ್ರಬಂಧಕ ಗಂಗಾಧರ, ಕೃಷಿ ಅಧಿಕಾರಿ ಬಿ.ಜೆ.ರಾಜು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ ಯೋಜನಾ ಕಚೇರಿ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts