More

    ಹಾಡಹಗಲೆ ಯುವಕನ ಕೊಲೆ

    ಕಲಬುರಗಿ: ನಗರದ ಮುಖ್ಯ ರಸ್ತೆಯ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ಗುರುವಾರ ಹಾಡಹಗಲೆ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದ್ದು, ನೋಡಿದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ಪುಡಿರೌಡಿಗಳ ಅಟ್ಟಹಾಸಕ್ಕೆ ಸಾರ್ವಜನಿಕರು ತಲ್ಲಣಿಸಿ ಹೋಗಿದ್ದಾರೆ.
    ವೀರೇಶ ಶರಣಬಸಪ್ಪ ಕಡಗಂಚಿ(20) ಕೊಲೆಯಾದವ. ಆಳಂದ ರಸ್ತೆಯ ರಾಣೋಸ್ಪೀರ್ ದರ್ಗಾ ಪ್ರದೇಶ ನಿವಾಸಿಯಾಗಿದ್ದು, ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಖಾರದಪುಡಿ ಅಂಬು ಗ್ಯಾಂಗ್ನವರ ಕೃತ್ಯ ಇದಾಗಿದೆ.
    ಗಾರ್ಡನ್ ಬಳಿಯ ಮುಖ್ಯ ರಸ್ತೆಯಲ್ಲಿ ವೀರೇಶ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದನ್ನು ಕಂಡು ಜನರು ಮರುಗಿದರು. ಹಲವರು ವಿಡಿಯೋ ಸಹ ಮಾಡಿದರು. ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಶುರುವಾದಂತಾಗಿದೆ.
    ಕೋಟನೂರ ಮಠದ ಹತ್ತಿರದ ನಿವಾಸಿಯಾದ ಅಂಬಾರಾಯ ಅಲಿಯಾಸ್ ಖಾರದಪುಡಿ ಅಂಬು, ಭವನ, ಲವ ನಂದಿಕೂರ, ಗಿರೀಶ, ಕಾಳು, ಬಸ್ಸು, ಅಭಿಲಾಶ್ ಇತರರು ಸೇರಿ ವೀರೇಶನಿಗೆ ಚಾಕುವಿನಿಂದ ಇರಿದಿದ್ದಾರೆ.
    ಕೊಲೆಯಾದ ವೀರೇಶಗೆ ಅಂಬು ಹಣ ಕೇಳಿದ್ದ. ಬುಧವಾರ ವೀರೇಶನ ಮನೆಗೆ ಹೋಗಿದ್ದ. ಈ ಕಾರಣಕ್ಕೆ ಫೋನ್ನಲ್ಲಿ ಇಬ್ಬರು ಬೈದಾಡಿಕೊಂಡಿದ್ದರು. ಗುರುವಾರ ಆತನನ್ನು ಹುಡುಕಾಡಿದಾಗ ಗಾರ್ಡನ್ನಲ್ಲಿ ಇರುವುದಾಗಿ ವೀರೇಶ ಹೇಳಿದಾಗ ಅಂಬು ಸೇರಿ ಎಲ್ಲರೂ ಸೇರಿ ಅಲ್ಲಿಗೆ ಹೋಗಿದ್ದರು. ಆಗ ವೀರೇಶ ಜತೆ ವಾಗ್ವಾದ ಶುರುವಾಗಿ ತೊಡೆ ಇತರ ಕಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆರೋಪಿಗಳು ಬಸವ ನಗರ, ಅಶೋಕ ನಗರ, ಕೋಟನೂರ ಮತ್ತು ನಂದಿಕೂರದವರು ಎಂದು ಹೇಳಲಾಗುತ್ತಿದೆ.
    ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವೀರೇಶನನ್ನು 108 ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದಾಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಸುದ್ದಿ ಅರಿಯುತ್ತಲೇ ಪೊಲೀಸ್ ಕಮೀಷನರ್ ಎನ್. ಸತೀಶಕುಮಾರ್, ಡಿಸಿಪಿ ಕಿಶೋರಬಾಬು, ಎಸಿಪಿ ವಿಜಯಕುಮಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಗಾರ್ಡನ್ ಬಳಿ ನಡೆದ ಯುವಕನ ಕೊಲೆ ಪ್ರಕರಣದ ಎಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಸಿಪಿ ವಿಜಯಕುಮಾರ ತಂಡದವರು ತನಿಖೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು.
    | ಎನ್. ಸತೀಶಕುಮಾರ್
    ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts