More

    ಹಸನ್ಮುಖಿಯಾಗಿರಲು ಕ್ರೀಡೆ ಅಗತ್ಯ-ಪ್ರಾಧ್ಯಾಪಕ ವೀರಪ್ಪ

    ದಾವಣಗೆರೆ: ನಾವು ಸದಾ ಆರೋಗ್ಯ ಹಾಗೂ ಹಸನ್ಮುಖಿಯಾಗಿರಲು ಕ್ರೀಡೆ ಅವಶ್ಯಕ ಎಂದು ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಬಿ.ಎಚ್.ವೀರಪ್ಪ ಹೇಳಿದರು.

    ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 27ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
    ಇಂದಿನ ದಿನಮಾನದಲ್ಲಿ ಮೊಬೈಲ್ ಗೀಳಿನಿಂದ ಹೊರಬಂದು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಮನಸ್ಸು ಮತ್ತು ದೇಹ ಆರೋಗ್ಯವಾಗಿರಲಿದೆ. ಹತ್ತು ಆಸ್ಪತ್ರೆಗಳನ್ನು ಕಟ್ಟುವುದಕ್ಕಿಂತ ಒಂದು ಕ್ರೀಡಾಂಗಣ ಕಟ್ಟಿದರೆ ಎಲ್ಲರಿಗೂ ಚೈತನ್ಯ ಸಿಗಲಿದೆ ಎಂದರು.
    ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು ಕ್ರೀಡಾಜ್ಯೋತಿ ಬೆಳಗಿ ಮಾತನಾಡಿ, ಶಾಲಾ ಹಂತದಲ್ಲಿ ಕ್ರೀಡಾಭ್ಯಾಸ ಮುಖ್ಯವಾಗಿವೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಪ್ರಾಚಾರ್ಯೆ ಜೆ.ಎಸ್. ವನಿತಾ ಮಾತನಾಡಿದರು. ಶೈಕ್ಷಣಿಕ ಮಾರ್ಗದರ್ಶಕ ಮಂಜಪ್ಪ, ಸುಮಂಗಲಾ, ಸುಮಾ ಕುಲಕರ್ಣಿ, ಪಿ.ವಿ ಪ್ರಭು, ಸವಿತಾ ರಮೇಶ್ ಇತರರಿದ್ದರು.
    ಕ್ರೀಡಾ ವಿಭಾಗದ ನಾಯಕರಾದ ಅಮೋಘ್ ಮತ್ತು ಸಿಂಚನಾ, ಶಾಲೆಯ ನಾಲ್ಕು ಕ್ರೀಡಾ ಸದನದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ತಂದು ಬೆಳಗಿದರು. ಪ್ರಾಥಮಿಕ ವಿಭಾಗದ ಕ್ರೀಡಾ ನೃತ್ಯಗಳು, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ನೃತ್ಯಗಳು ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts