More

    ಹಳೇ ಬಸ್ ನಿಲ್ದಾಣದ ತೆರವು ಕಾರ್ಯ ಶುರು

    ಶಿರಸಿ: ತೀರಾ ಶಿಥಿಲಾವಸ್ಥೆ ತಲುಪಿರುವ ಇಲ್ಲಿನ ಹಳೆಯ ಬಸ್ ನಿಲ್ದಾಣದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ನೂತನ ಬಸ್ ನಿಲ್ದಾಣ ಕಟ್ಟಲು ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರಾಗಿದೆ.

    ನಗರದ ಹೃದಯ ಭಾಗದಲ್ಲಿರುವ ಈ ನಿಲ್ದಾಣದಿಂದ ಸಾವಿರಾರು ಪ್ರಯಾಣಿಕರು ಇಲ್ಲಿಂದಲೇ ನಿತ್ಯ ಓಡಾಡುತ್ತಾರೆ. ನೂರಾರು ಬಸ್​ಗಳು ಸಂಚರಿಸುತ್ತವೆ. ತೀರಾ ಇಕ್ಕಟ್ಟಾದ ಜಾಗದಲ್ಲಿ ಇಷ್ಟೊಂದು ಬಸ್​ಗಳು, ಪ್ರಯಾಣಿಕರು ಸಂಚರಿಸುವುದು ಕಿರಿಕಿರಿಯಾಗಿತ್ತು. ಅದರೊಂದಿಗೆ ನಿಲ್ದಾಣವೂ ಶಿಥಿಲಾವಸ್ಥೆ ತಲುಪಿದ್ದು ಕೆಡವಲು ಆಗ್ರಹ ಕೇಳಿಬಂದಿತ್ತು.

    ಆದರೆ, ಎರಡ್ಮೂರು ವರ್ಷಗಳ ಕಾಲ ನಿರಂತರವಾಗಿ ನಿಲ್ದಾಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಿದರೂ ಟೆಂಡರ್ ಹಾಕುವವರು ಬಂದಿರಲಿಲ್ಲ. ಆದ್ದರಿಂದ ನಿಲ್ದಾಣ ಕೆಡವಲು ಸಾಧ್ಯವಾಗಿರಲಿಲ್ಲ. ಈಗ ಟೆಂಡರ್ ಪ್ರಕ್ರಿಯೆ ನಡೆದು, 2.80 ಲಕ್ಷ ರೂ. ವೆಚ್ಚದಲ್ಲಿ ನಿಲ್ದಾಣ ಕೆಡವಿ ತೆರವು ಮಾಡುವ ಕಾರ್ಯ ಇದೀಗ ಆರಂಭಗೊಂಡಿದೆ. ಕೆಲ ದಿನಗಳಿಂದ ನಿಲ್ದಾಣದ ಮೊದಲ ಮಹಡಿಯ ಛಾವಣಿಯನ್ನು ಒಡೆಯಲಾಗುತ್ತಿದ್ದು, ಇದೀಗ ಅದರ ಗೋಡೆ ಸಡಿಲಗೊಳಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ನೆಲಮಹಡಿ ಸೇರಿ ಪೂರ್ಣ ತೆರವು ಆಗುವ ಸಾಧ್ಯತೆಯಿದೆ.

    ಶೆಡ್ ಹಾಕಿ ವ್ಯವಸ್ಥೆ: ಕರೊನಾ ಕಾರಣದಿಂದ ಓಡಾಡುವ ಬಸ್​ಗಳ, ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಬಹುತೇಕ ಬಸ್​ಗಳು ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗಿಳಿದಿವೆ. ಇದರಿಂದ ತೆರವು ಮಾಡುವ ಕಾರ್ಯಕ್ಕೆ ಅನುಕೂಲವಾಗಿದೆ. ನೂತನ ಕಟ್ಟಡ ನಿರ್ಮಾಣ ಆಗುವವರೆಗೂ ಸದ್ಯಕ್ಕೆ ಇಲ್ಲಿಯೇ ಶೆಡ್ ಹಾಕಿ ಪ್ರಯಾಣಿಕರು ನಿಲ್ಲುವುದಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯೋಜಿಸಲಾಗಿದೆ.

    6 ದಶಕಗಳಿಂದಿದ್ದ ಕಟ್ಟಡ ಸಂಪೂರ್ಣ ಶಿಥಿಲವಾಗಿತ್ತು. ಹಾಗಾಗಿ ಸರ್ಕಾರದ ಅನುಮತಿ ಪಡೆದು ಕೆಡಗುವ ಕಾರ್ಯ ಮಾಡಲಾಗುತ್ತಿದೆ. ಶೀಘ್ರವೇ ಈ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ನೂತನ ಕಟ್ಟಡ ನಿರ್ವಿುಸಲು ಕ್ರಮ ವಹಿಸಲಾಗುವುದು.
    | ವಿವೇಕ ಹೆಗಡೆ ಎನ್​ಡಬ್ಲು್ಯಕೆಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts