More

    ಹಳಿಯಾಳದಲ್ಲಿ ಬಿಸಿಯೂಟ ನೌಕರರ ಪ್ರತಿಭಟನೆ

    ಹಳಿಯಾಳ: ಏಪ್ರಿಲ್ ತಿಂಗಳಿನಿಂದ ಬಾಕಿ ಇರುವ ವೇತನ ಹಾಗೂ ಇತರ ಸೇವಾ ಭದ್ರತೆಯ ಸೌಲಭ್ಯಗಳನ್ನು ನೀಡಬೇಕು ಎಂದು ತಾಲೂಕಿನ ಬಿಸಿಯೂಟ ನೌಕರರು ಸಿಐಟಿಯು ಮುಂದಾಳತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು.

    ಬಳಿಕ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಇಒ ಪ್ರವೀಣಕುಮಾರ ಸಾಲಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿಸಿಯೂಟ ನೌಕರರಿಗೆ ಏಪ್ರಿಲ್ ತಿಂಗಳಿಂದ ಶಾಲೆ ಆರಂಭವಾಗುವವರೆಗೆ ವೇತನ ಪಾವತಿಸಬೇಕು, ಬಿಸಿಯೂಟ ನೌಕರರನ್ನು ಕಾಯಂ ಮಾಡಬೇಕು. ಕನಿಷ್ಠ 6 ತಿಂಗಳವರೆಗೆ ಪಡಿತರ ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ದಾಂಡೇಲಿ ಇಒ ಪರಶುರಾಮ ಗಸ್ತಿ, ಸಿಐಟಿಯುನ ಆರ್.ಎಂ. ಮುಲ್ಲಾ, ಠಕ್ಕಪ್ಪ ಗುರಬಣ್ಣನವರ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶೋಭಾ ಕುರೆಟ್ಟಿ, ಜಯಶ್ರೀ ಚವ್ಹಾಣ, ವಿಜಯಲಕ್ಷ್ಮೀ ಚವ್ಹಾಣ, ಹಸೀನಾ ಕಿತ್ತೂರ ಇತರರು ಇದ್ದರು. ನಂತರ ಬಿಸಿಯೂಟ ನೌಕರರು ಮಿನಿವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts