More

    ಹರತಾಳು ಹಾಲಪ್ಪ ಬಿಜೆಪಿ ಅಭ್ಯರ್ಥಿ; ಪಕ್ಷ ಏನು ಹೇಳುತ್ತದೋ ಗೊತ್ತಿಲ್ಲ: ಜಿಲ್ಲಾಧ್ಯಕ್ಷರ ಸಮ್ಮುಖ ಮಾಜಿ ಶಾಸಕ ಬಿ.ಸ್ವಾಮಿರಾವ್ ಘೋಷಣೆ

    ಹೊಸನಗರ: ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಹರತಾಳು ಹಾಲಪ್ಪ ನಮ್ಮ ಅಭ್ಯರ್ಥಿ. ಈ ಬಗ್ಗೆ ಪಕ್ಷ ಏನು ಹೇಳುತ್ತದೋ ಗೊತ್ತಿಲ್ಲ ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತಿಯಲ್ಲೇ ಘೋಷಣೆ ಮಾಡಿ ಅಚ್ಚರಿ ಮೂಡಿಸಿದರು.
    ಪಟ್ಟಣದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಶ್ರೀ ನಾರಾಯಣಗುರು ಜಯಂತಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಅವರನ್ನು ಹಾಡಿ ಹೊಗಳಿದ ಸ್ವಾಮಿರಾವ್, ಲೋಕಸಭಾ ಕ್ಷೇತ್ರ, ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತವಾಗಿ ನಡೆಯುತ್ತಿವೆ. ಇದಕ್ಕಿಂತ ಹೆಚ್ಚು ಅಭಿವೃದ್ಧಿ ಕೆಲಸಗಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
    ನಾನು ಕೂಡ ಶಾಸಕನಾಗಿದ್ದೆ. ಆದರೆ ಈಗಿನಷ್ಟು ಅನುದಾನ ಆಗ ಸಿಗುತ್ತಿರಲಿಲ್ಲ. ಈಗ ಅನುದಾನ ಹರಿದು ಬರುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಸಾಗರ, ಹೊಸನಗರದ ಅಭಿವೃದ್ಧಿಗೆ ಹೇಗೆ ಸ್ಪಂದಿಸಿದ್ದೇನೆ, ಎಷ್ಟು ಅನುದಾನ ತಂದಿದ್ದೇನೆ ಎನ್ನುವುದು ಜನರಿಗೆ ಗೊತ್ತು. ಆದರೆ ಕೆಲವರು ಪ್ರಚಾರದ ದೃಷ್ಟಿಯಿಂದ ಟೀಕಿಸುತ್ತಾರೆ. ಹೀಗೆ ಟೀಕಿಸುವ ವ್ಯಕ್ತಿ ಹಿಂದೆ ಶಾಸಕನಾಗಿದ್ದಾಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಬಿ.ಸ್ವಾಮಿರಾವ್ ಮಾಡಿದ ಅಭಿವೃದ್ಧಿ ಬಗ್ಗೆ ಏನು ಹೇಳಾಗದು. ಆದರೆ ಟೀಕಿಸುವ ವ್ಯಕ್ತಿ ಶಾಸಕರಾಗಿದ್ದಾಗ ಯಡಿಯೂರಪ್ಪ ಸಿಎಂ ಆಗಿದ್ದರು. ರಾಘವೇಂದ್ರ ಸಂಸದರಾಗಿದ್ದರು. ಅನುದಾನ ಕೂಡ ತರಬಹುದಿತ್ತು. ಆದರೆ ಏನು ಮಾಡಿದ್ದಾರೆ ಹೇಳಲಿ ಎಂದು ಬೇಳೂರು ಗೋಪಾಲಕೃಷ್ಣ ಹೆಸರೇಳದೆ ಸವಾಲು ಹಾಕಿದರು.
    ಕಾಂಗ್ರೆಸ್ ಪ್ರಮುಖರಾದ ಎಂ.ಗುಡ್ಡೆಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಕಾಲಸಸಿ ಸತೀಶ್, ಹರತಾಳು ಗ್ರಾಪಂ ಅಧ್ಯಕ್ಷ ಕಲ್ಲಿ ಯೋಗೇಂದ್ರಪ್ಪ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts