More

    ಹಬ್ಬದ ಸಂಭ್ರಮ ಕಸಿದ ಪ್ರವಾಹ

    ನರಗುಂದ: ಗಣೇಶ ಚತುರ್ಥಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಪ್ರತಿಯೊಬ್ಬರ ಮನೆ, ಗಲ್ಲಿ, ಬೀದಿ- ಬೀದಿಗಳಲ್ಲಿ ಬಾಲ ಗಣೇಶನಿಂದ ಹಿಡಿದು ಬೃಹತ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಆದರೆ, ಈ ಬಾರಿ ಮಲಪ್ರಭೆಯ ಪ್ರವಾಹವು ನದಿ ಸುತ್ತಲಿನ ಕೆಲ ಗ್ರಾಮಗಳ ಜನರ ಬದುಕಿನೊಂದಿಗೆ ಗಣೇಶನ ಹಬ್ಬದ ಸಂಭ್ರಮವನ್ನೂ ಕಸಿದುಕೊಂಡಿದೆ.

    ತಾಲೂಕಿನ ಲಖಮಾಪೂರ ಗ್ರಾಮದ ಎಲ್ಲ ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ನೆಲೆಸುವಂತಾಗಿದೆ. ಜತೆಗೆ ಸುತ್ತಲಿನ ವಾಸನ, ಬೆಳ್ಳೇರಿ, ಕೊಣ್ಣೂರ, ಬೂದಿಹಾಳ ಗ್ರಾಮಗಳ ಕೆಲ ಕುಟುಂಬಗಳು ಹಬ್ಬವನ್ನು ಆಚರಿಸದಂತಾಗಿದೆ.

    ಪ್ರವಾಹದಿಂದ ಸಂಪೂರ್ಣ ನಡುಗಡ್ಡೆಯಂತಾಗಿದ್ದ ಲಖಮಾಪೂರ ಗ್ರಾಮದ ಏಕೈಕ ರಸ್ತೆಯೂ ಇದೀಗ ಕೊಚ್ಚಿ ಹೋಗಿದೆ. ಹೀಗಾಗಿ ಹುಟ್ಟಿ ಬೆಳೆದ ಗ್ರಾಮವನ್ನೇ ತೊರೆದಿರುವ ಗ್ರಾಮಸ್ಥರು ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜಿನ ಕಾಳಜಿ ಕೇಂದ್ರದಲ್ಲಿ ನೆಲೆಸಿದ್ದಾರೆ. ಮುಂಗಾರು ಹಂಗಾಮಿನ ಹೆಸರಿನ ಸುಗ್ಗಿ ಕಾಲವಿದು. ಕೆಲ ರೈತರಿಗೆ ತಮ್ಮ ಜಮೀನಲ್ಲಿರುವ ಹೆಸರು ಬೆಳೆ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲ ರೈತರು ಬೆಳೆದಿದ್ದ ಹೆಸರು ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಈ ಗ್ರಾಮದಲ್ಲಿ ಶುಕ್ರವಾರ ಸಂಜೆವರೆಗೆ ಯಾರೊಬ್ಬರೂ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೇಳಿಲ್ಲ ಎಂದು ತಿಳಿದುಬಂದಿದೆ.

    ಪ್ರವಾಹದಿಂದ ಕೊಣ್ಣೂರ ಭಾಗದ ಸುತ್ತಲಿನ ಗ್ರಾಮಸ್ಥರು ತೊಂದರೆಯಲ್ಲಿದ್ದಾರೆ. 2 ವರ್ಷಗಳಿಂದ ಮಲಪ್ರಭೆ ನದಿಯಲ್ಲಿ ಸಾಕಷ್ಟು ನೀರಿದ್ದರೂ ಸಂಭ್ರಮದಿಂದ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳು ಇತರ ಮಕ್ಕಳಂತೆ ಪಟಾಕಿ ಹೊಡೆದು ಖುಷಿಪಡಲು ಅವಕಾಶ ಇಲ್ಲದಂತಾಗಿದೆ. ನಮಗೆ ಬಂದಿರುವ ಕಷ್ಟವನ್ನು ಗಣೇಶನೇ ಪರಿಹರಿಸಬೇಕು.
    | ಅಪ್ಪಣಗೌಡ ಅರ್ಭಣದ ಕೊಣ್ಣೂರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts