More

    ಹಣಕ್ಕಾಗಿ ಅಧಿಕಾರಿಗಳ ಪೀಡನೆಗೆ ಕಿಡಿ

    ಕಲಬುರಗಿ: ಸುಳ್ಳು ಆರೋಪ ಹೊರಿಸಿ ಹಣಕ್ಕಾಗಿ ಸರ್ಕಾರಿ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನೊಂದಿರುವ ಅಧಿಕಾರಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
    ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಹೆಸರಿನಲ್ಲಿ ಸಿದ್ದು (ಸಿದ್ರಾಮಯ್ಯ) ಹಿರೇಮಠ ಎಂಬುವರು ಬಹುತೇಕ ಎಲ್ಲ ಇಲಾಖೆ ಅಧಿಕಾರಿಗಳಿಗೆ ಕಿರುಕುಳ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಆರ್ಟಿಐ ಅರ್ಜಿ ಹಾಕಿ ಬೆದರಿಸುತ್ತಿರುವುದರಿಂದ ಅಧಿಕಾರಿಗಳು ತತ್ತರಿಸಿದ್ದಾರೆ. ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರು ಹಿರೇಮಠ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯದಲ್ಲಿ ವನ್ಯಜೀವಿಗಳಿಗೆ ಹೊರಗಿನ ಆಹಾರ ತಿನ್ನಿಸಿ ಸಾವಿಗೆ ಕಾರಣರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕೇಸ್ ಸಹ ದಾಖಲಾಗಿದೆ. ಹೀಗಾಗಿ ಕೂಡಲೇ ಹಿರೇಮಠ ಅವರನ್ನು ಬಂಧಿಸಬೇಕು. ಅಫಜಲಪುರ ತಾಲೂಕಿನ ಬಿದನೂರ ಮತ್ತು ಹಾವನೂರ ಗ್ರಾಪಂನಲ್ಲಿ ಉದ್ಯೋಗ ಖಾತ್ರಿಯಡಿ ಉತ್ತಮ ಸಾಧನೆ ಮಾಡಿದರೂ ಇಲ್ಲದ ಆರೋಪ ಮಾಡಿ ವಸೂಲಿ ಮಾಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಜಗತ್ ವೃತ್ತದಿಂದ ಜಿಪಂ ಕಚೇರಿವರೆಗೆ ಮೆರವಣಿಗೆ ನಡೆಸಿ ಸಿಇಒ ಮತ್ತು ಜಿಲ್ಲಾಧಿಕಾರಿಗೆ ಪ್ರತ್ಯೇಕ ಮನವಿಪತ್ರ ಸಲ್ಲಿಸಿದರು.
    ಹೋರಾಟಗಾರರಾದ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ ಮಾತನಾಡಿದರು. ಪ್ರಮುಖರಾದ ಚಂದಪ್ಪ ಪೂಜಾರಿ, ಸುರೇಶ ದೊಡ್ಡಮನಿ, ಕೆಂಚಪ್ಪ ಕೊರಬಾ, ಪೀರಪ್ಪ ಜಮಾದಾರ, ಶಿವರಾಯ ಗೊಬ್ಬೂರ, ದೇವು ಪಾಟೀಲ್, ಫಾತಿಮಾ ಬೇಗಂ ಪತ್ತೆಪಾಹಡ, ಮಡಿವಾಳಪ್ಪ ಅವರಳ್ಳಿ, ನಿಂಗಪ್ಪ ಪೂಜಾರಿ, ಶರಣು ದೊಡ್ಮನಿ ಭೈರಾಮಡಗಿ, ಶಶಿಕಲಾ ಮದರಕಿ, ಮಡಿವಾಳಪ್ಪ, ಭಾಗಣ್ಣ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts