More

    ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ

    ಬೆಳಗಾವಿ: ಹಡಪದ ಸಮಾಜಕ್ಕೆ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಹಾಗೂ ಈ ಜನಾಂಗದ ಅಭಿವೃದ್ಧಿಗಾಗಿ 50 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸಂಘ ಸೋಮವಾರ ಪ್ರತಿಭಟನೆ ನಡೆಸಿ, ಸರ್ಕಾರವನ್ನು ಒತ್ತಾಯಿಸಿದರು.


    ಹಡಪದ ಸಮಾಜದ ಕುಲ ಶಾಸೀಯ ಅಧ್ಯಯನವನ್ನು ದಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಮೂಲಕ ನಡೆಸಬೇಕು. ಬೆಳಗಾವಿ ಸೇರಿದಂತೆ ರಾಜ್ಯದ ಬಡ ಹಡಪದ ಸಮಾಜಕ್ಕೆ ಪ್ರತಿ ತಾಲೂಕಿನಲ್ಲಿ ನಿವೇಶನ ಹಾಗೂ ಅನುದಾನ ನೀಡುವುದರೊಂದಿಗೆ ಸಮುದಾಯ ಭವನ ನಿರ್ಮಾಣ ಮಾಡ ಬೇಕು. ಸುಕ್ಷೇತ್ರ ತಂಗಡಗಿ ಅಪ್ಪಣ್ಣದೇವರ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎನ್.ಶಂಕರಪ್ಪ ಅವರು ಕಳೆದ 2012ರಲ್ಲಿ ಪ್ರವರ್ಗ 3 ಬಿ ದಲ್ಲಿರುವ ಲಿಂಗಾಯತ ಹಡಪದ ಹಾಗೂ ಅದರ ಉಪನಾಮಗಳ ಬಗ್ಗೆ ಸ್ಥಾನಿಕ ಚೌಕಾಶಿ ಮಾಡಿ ಅವರಿಗೆ 2-ಎ ಜಾತಿ ಪ್ರಮಾಣಪತ್ರ ನೀಡಬೇಕೆಂದು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಈವರೆಗೂ ಜಾರಿಗೆ ತಂದಿಲ್ಲ. ಕೂಡಲೇ ಈ ವರದಿ ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಭಾರತಿ ಅಪ್ಪಣ್ಣ ಶ್ರೀ, ಗುಡ್ಡಪ್ಪ ಮಲ್ಲೂರು ನಾಗರಾಜ, ಗಂಗಾಧರ ಎಮ್ಮಿಗನೂರು, ಸುರೇಶ ಹಡಪದ, ಸಂತೋಷ ಹಡಪದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts