More

    ಹಗಲು ಮನೆಗಳ್ಳರ ಬಂಧನ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ತಾಳಿಕೋಟಿಯ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ ಒಟ್ಟು 4,14,500ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
    ಸ್ಥಳೀಯ ಅಟೋ ಇಂದಿರಾ ನಗರದ ನಿವಾಸಿ ಅಬೂಬಕರ್ ರಜಾಕಸಾಬ್ ಝಂಡೆ (23), ಭಾಗಾಯತ ಗಲ್ಲಿಯ ಮಹಮ್ಮದ್‌ಯೂಸ್ೂ ಅಯೂಬ್ ಕೋಟಿಹಾಳ (21) ಹಾಗೂ ಅರಕೇರಿ ಗಲ್ಲಿಯ ಸಮೀರ ಊಫ್ ಪಿಕೆ ನಬಿಲಾಲ ಇನಾಮದಾರ ಬಂಧಿತ ಆರೋಪಿಗಳು.
    ಅ. 24 ರಂದು ತಾಳಿಕೋಟಿ ಪಟ್ಟಣದ ಗಣೇಶ ನಗರದಲ್ಲಿ ಅನೀಲಕುಮಾರ ಶಿವಯ್ಯ ಆಲಾಳಮಠ ಎಂಬುವರ ಮನೆ ಬಾಗಿಲು ಮುರಿದು 36050 ರೂ.ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣ ಕಳವು ಮಾಡಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಸದರಿ ತಂಡ ಆರೋಪಿತರ ತಪಾಸಣೆಯಲ್ಲಿದ್ದಾಗ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಈ ಮೂವರು ಸಿಕ್ಕಿ ಬಿದ್ದಿದ್ದಾರೆ. ಬಳಿಕ ವಿಚಾರಣೆ ನಡೆಸಲಾಗಿ ವಿವಿಧೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
    9 ಸಾವಿರ ರೂ.ಮೌಲ್ಯದ ಚಿನ್ನದ ಉಂಗುರ, 25 ಸಾವಿರ ರೂ.ಮೌಲ್ಯದ 5 ಗ್ರಾಮ ಚಿನ್ನದ ಗಣಪತಿ ಚಿತ್ರ, 4 ಸಾವಿರ ರೂ.ಮೌಲ್ಯದ ಟೈಟಾನ್ ವಾಚ್, 500 ರೂ.ಮೌಲ್ಯದ 1 ಜೊತೆ ಬೆಳ್ಳಿ ಕಾಲುಂಗುರ, 50 ಸಾವಿರ ರೂ.ಮೌಲ್ಯದ ಚಿನ್ನದ ಉಂಗುರ, 75 ಸಾವಿರ ರೂ.ಮೌಲ್ಯದ 2 ಚಿನ್ನದ ಸರ, 1.75 ಸಾವಿರ ರೂ.ಮೌಲ್ಯದ ಬಂಗಾರ ಬಳೆಗಳು ಸೇರಿ ಒಟ್ಟು 4,14,500ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
    ಎಸ್‌ಪಿ ಅನುಪಮ ಅಗರವಾಲ್ ಹಾಗೂ ಎಎಸ್‌ಪಿ ಡಾ.ರಾಮ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಶಿವಾಜಿ ಪವಾರ, ಪಿಎಸ್‌ಐ ಜಿ.ಜಿ. ಬಿರಾದಾರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts