More

    ಹಕ್ಕು ಚಲಾಯಿಸಿದ ಹನೂರು ಅಭ್ಯರ್ಥಿಗಳು

    ಹನೂರು: ವಿಧಾನಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಆರ್.ನರೇಂದ್ರ ಹಾಗೂ ಬಿಜೆಪಿ ಡಾ.ಪ್ರೀತನ್ ನಾಗಪ್ಪ ಅವರು ಬುಧವಾರ ಸ್ವ ಗ್ರಾಮದಲ್ಲಿ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.


    ದೊಡ್ಡಿಂದುವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 40ಕ್ಕೆ ಆಗಮಿಸಿದ ಶಾಸಕ ಆರ್.ನರೇಂದ್ರ, ಪತ್ನಿ ಆಶಾ, ಪುತ್ರ ನವನೀತ್‌ಗೌಡ ಹಾಗೂ ಪುತ್ರಿಯರಾದ ಅಮಿತಾ, ನಿಖಿತಾರೊಡನೆ ಸರತಿಯಲ್ಲಿ ತೆರಳಿ ಮತ ಚಲಾಯಿಸಿದರು. ಇತ್ತ ಕಾಮಗೆರೆ ಗ್ರಾಮದ ಮತಗಟ್ಟೆ ಸಂಖ್ಯೆ 50ಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಅವರು, ತಾಯಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪತ್ನಿ ಅರ್ಪಣಾ ಹಾಗೂ ಸಹೋದರಿ ಪ್ರಿಯಾಂಕರೊಡನೆ ಸರತಿಯಲ್ಲಿ ಸಾಗಿ ಮತ ಚಲಾಯಿಸಿದರು.


    ಅಭ್ಯರ್ಥಿಗಳ ಮತ ಚಲಾವಣೆ: ಇನ್ನು ಬಿಎಸ್ಪಿಯ ಮಾದೇಶ ಶಾಗ್ಯ ಗ್ರಾಮದಲ್ಲಿ, ಆಮ್ ಆದ್ಮಿಯ ಹರೀಶ್ ಮತ್ತೀಪುರದಲ್ಲಿ, ಕಂಟ್ರಿ ಸಿಟಿಜನ್ ಪಾರ್ಟಿಯ ಸಿದ್ದಪ್ಪ ಹಲಗಾಪುರದಲ್ಲಿ ಮತದಾನ ಮಾಡಿದರು. ಕೆಆರ್‌ಎಸ್ ಪಕ್ಷದ ಸುರೇಶ್ ಕಣ್ಣೂರು ಗ್ರಾಮ, ಪಕ್ಷೇತರ ಅಭ್ಯರ್ಥಿಗಳಾದ ಹನೂರು ನಾಗರಾಜು, ಡಿ.ಎಂ. ಪ್ರದೀಪ್‌ಕುಮಾರ್ ಅವರು ಸಮುದ್ರ ಗ್ರಾಮದಲ್ಲಿ, ಮುತ್ತುರಾಜು ದೊಡ್ಡಿಂದುವಾಡಿಯಲ್ಲಿ, ರಾಜಶೇಖರ್ ಮೇಗಲೂರು ಪೊನ್ನಾಚಿ, ಸೆಲ್ವರಾಜ್ ಮಾರ್ಟಳ್ಳಿಯಲ್ಲಿ ಮತ ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts