More

    ಹಕ್ಕುಪತ್ರ ಕೊಟ್ಟವರಿಗೆ ಖಾತೆ ಮಾಡಿಕೊಡಲು ಆಗ್ರಹ; ಜೋಗ ನಿವಾಸಿಗಳಿಂದ ಪ್ರತಿಭಟನೆ

    ಕಾರ್ಗಲ್: ಜೋಗ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅಕ್ರಮ-ಸಕ್ರಮ ಅಡಿಯಲ್ಲಿ ನೀಡಲಾದ ಹಕ್ಕುಪತ್ರಗಳಿಗೆ ಜೋಗ ಕಾರ್ಗಲ್ ಪಪಂ ಇನ್ನೂ ಖಾತೆ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಜೋಗದ ನಿವಾಸಿಗಳು ಗುರುವಾರ ಪಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಪಂ ಮಾಜಿ ಅಧ್ಯಕ್ಷ ಎಸ್.ಎಲ್.ರಾಜ್‌ಕುಮಾರ್ ಮಾತನಾಡಿ, ಜೋಗದ ಸರ್ವೇ ನಂ.14ರಲ್ಲಿ 2001-2002ನೇ ಸಾಲಿನಲ್ಲಿ 450 ಕುಟುಂಬಗಳಿಗೆ ಅಕ್ರಮ ಸಕ್ರಮದಡಿ ಅಂದಿನ ತಹಸೀಲ್ದಾರ್ ಹಕ್ಕುಪತ್ರವನ್ನು ನೀಡಿದ್ದರು. ಈ ಹಕ್ಕುಪತ್ರಗಳಿಗೆ ಮುಖ್ಯಾಧಿಕಾರಿಗಳು ಖಾತೆ ಮಾಡಿಕೊಡಬೇಕಾಗಿತ್ತು. ಆದರೆ ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯು ಆಕ್ಷೇಪಿಸುತ್ತಿದ್ದು ಇದನ್ನೇ ಮುಂದಿಟ್ಟುಕೊಂಡು ಹಲವು ವರ್ಷಗಳಿಂದ ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವ ಕಾರ್ಗಲ್‌ನ ಹಲವು ಮನೆಗಳಿಗೆ ಈಗಾಗಲೇ ಪಪಂನಿಂದ ಖಾತೆ ಮಾಡಿಕೊಡಲಾಗಿದೆ. ಹಾಗಾದರೆ ಜೋಗಕ್ಕೊಂದು, ಕಾರ್ಗಲ್ಲಿಗೊಂದು ಪ್ರತ್ಯೇಕ ಕಾನೂನು ಇದೆಯೇ? ಪಂಚಾಯಿತಿ ಅಧಿಕಾರಿಗಳ ಇಂತಹ ತಾರತಮ್ಯ ನೀತಿ ಸಹಿಸಲು ಸಾಧ್ಯವಿಲ್ಲ. ಈ ಕೂಡಲೆ ಯಾವುದೇ ನೆಪ ಹೇಳದೆ ಹಕ್ಕುಪತ್ರ ಹೊಂದಿರುವ ಜೋಗದ ನಿವಾಸಿಗಳ ಎಲ್ಲ ಮನೆಗಳಿಗೆ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts