More

    ಸ್ವಾತಂತ್ರ್ಯ ಉತ್ಸವದಲ್ಲಿ‌ ಸಂಸದರ ಮುನಿಸು, ನಿರೂಪಕರೊಂದಿಗೆ ಅಭಿಮಾನಿಗಳ ಜಗಳ, ರಮೇಶ ಜಿಗಜಿಣಗಿ ಕಿಡಿ ಕಿಡಿ…!

    ವಿಜಯಪುರ: ಅದ್ಯಾಕೋ ಸಚಿವೆ ಜೊಲ್ಲೆ ನೇತೃತ್ವದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಘಳಿಗೆಯೇ ಸರಿ‌ ಇದ್ದಂತೆ ಕಾಣಲಿಲ್ಲ !

    ಕರ್ನಾಟಕ ರಾಜ್ಯ ಅಕ್ಕಮಹಾದೇವಿ‌ ಮಹಿಳಾ ವಿವಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮ ಹಲವು ಅಸಮಾಧಾನ, ಪ್ರತಿಭಟನೆ ಹಾಗೂ ರಾಜಕೀಯ ತಿಕ್ಕಾಟಗಳಿಗೆ ಸಾಕ್ಷಿಯಾಯಿತು.
    ಆರಂಭದಲ್ಲೇ ಕಾಂಗ್ರೆಸ್ ಹಾಗೂ ಮಹಿಳಾ ಸಂಘಟಕರಿಂದ ಪ್ರತಿಭಟನೆ ಎದುರಿಸಿದ ಸಚಿವೆ ಜೊಲ್ಲೆ ಆ ಬಳಿಕ ತಮ್ಮದೇ ಪಕ್ಷದವರ ಅಸಮಾಧಾನಕ್ಕೆ ಕಾರಣವಾಗಬೇಕಾಯಿತು.
    ಧ್ವಜಾರೋಹಣ ಬಳಿಕ ಸಾಧಕರಿಗೆ ಸನ್ಮಾನ ಸಮಾರಂಭ ನೆರವೇರಿಸಲು ಸಚಿವೆ ಜೊಲ್ಲೆ ಮುಂದಾದರು. ಈ ವೇಳೆ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಜೊಲ್ಲೆಗೆ ಸಾಥ್ ನೀಡಿದರು. ಆದರೆ, ಸಂಸದ ರಮೇಶ ಜಿಗಜಿಣಗಿ ಮಾತ್ರ ಏಕಾಂಗಿಯಾಗಿ ದೂರವೇ ಕುಳಿತಿದ್ದರು. ಇದನ್ನು ಕಂಡ ಅವತ ಅಭಿಮಾನಿಯೋರ್ವ ನಿರೂಪಕರೊಂದಿಗೆ ಜಗಳ ಕಾದನು. ಸಂಸದರ ಹೆಸರು ಏಕೆ ಕೂಗಲಿಲ್ಲ ಎಂದು ರಂಪ ಮಾಡಿದನು. ಕೂಡಲೇ ಎಚ್ಚೆತ್ತ ಸಚಿವೆ ಜೊಲ್ಲೆ ಸಂಸದರ ಬಳಿ ಬಂದು ನೀವು ಬರಲೇಬೇಕೆಂದು ಪಟ್ಟು ಹಿಡಿದು ಕರೆದೊಯ್ದರು. ಈ ವೇಳೆ‌ ಸಂಸದರು ಅಧಿಕಾರಿಗಳ ಮೇಲೆ ಹರಿಹಾಯ್ದಿರಲ್ಲದೇ “ಇವರ ಬಗ್ಗೆ ನಿಮಗಿನ್ನೂ ಗೊತ್ತಿಲ್ಲ ಅಮ್ಮ” ಎಂದು ತಪ್ಪೆಲ್ಲ ಅಧಿಕಾರಿಗಳ ಮೇಲೆ ಹೊರಿಸಿದರು. ಇದಕ್ಕೂ ಮೊದಲೇ‌ ಸಚಿವೆ ಜೊಲ್ಲೆ ಸಂಸದರನ್ನು ಆಹ್ವಾನಿಸಿದ್ದರಾದರೂ ಅದೇಕೋ‌ ಸಂಸದರು ಮಾತ್ರ ಹೋಗದೇ ಇರುವುದು ಕಂಡು ಬಂದಿತ್ತು. ಶಾಸಕ‌ ಬಸನಗೌಡ ಪಾಟೀಲ ಯತ್ನಾಳ‌ ಸನ್ಮಾನ ಸಮಾರಂಭದ ಮುಂಚೂಣಿಯಲ್ಲಿದ್ದರು. ಇನ್ನುಳಿದಂತೆ ವಿಪ‌ ಸದಸ್ಯ ಅರುಣ ಶಹಾಪುರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts