More

    ಸ್ವಾತಂತ್ರೃ ಹೋರಾಟದಲ್ಲಿ ಅಜ್ಞಾತರೇ ಜಾಸ್ತಿ: ದು.ಗು.ಲಕ್ಷ್ಮಣ್

    ಸಾಗರ: ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಭಾರತದವರು ಪ್ರಮುಖವಾಗಿದ್ದರು. ದಕ್ಷಿಣ ಭಾರತ ಸಕ್ರಿಯವಾಗಿ ಪಾಲ್ಗೊಂಡಿರಲೇ ಇಲ್ಲ ಎಂಬ ಮಿಥ್ಯೆಯೇ ಹೆಚ್ಚು ದಟ್ಟವಾಗಿದೆ ಎಂದು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.
    ತಾಲೂಕಿನ ಭೀಮನಕೋಣೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಯುವಕ ರೈತಮಿತ್ರ ವೃಂದ ಹಾಗೂ ಕಸ್ತೂರಬಾ ಮಹಿಳಾ ಮಂಡಳಿ ಜೋಶಿ ಫೌಂಡೇಶನ್ ಹಾಗೂ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಅಗಣಿತ ಅಜ್ಞಾತ ವೀರರು’ ದಿಕ್ಸೂಚಿ ಭಾಷಣ ಮಾಡಿ, ವಾಸ್ತವವಾಗಿ ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧಿ, ನೆಹರು, ಭಗತ್‌ಸಿಂಗ್, ಆಜಾದ್ ಅವರ ಹೆಸರು ಪ್ರಸ್ತಾಪವಾಗಿ ದಕ್ಷಿಣ ಭಾರತದವರ ಉಲ್ಲೇಖ ಹೆಚ್ಚಾಗಿ ಇಲ್ಲದಿರುವುದು ತಪ್ಪುಗ್ರಹಿಕೆಗೆ ಕಾರಣವಾಗಿರಬಹುದು ಎಂದರು.
    ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಞಾತರಾಗಿ ಪಾಲ್ಗೊಂಡ ಅಸಂಖ್ಯಾತ ಹೆಸರುಗಳಿವೆ. ಇತಿಹಾಸ ತಜ್ಞರು ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಮಾಡಿಲ್ಲದಿರುವುದರಿಂದ ಅಂತಹ ಹೆಸರುಗಳು ಚಾಲ್ತಿಗೆ ಬಂದಿಲ್ಲ. ಮುಸೈಸ್ ಸಿಂಗ್ ಎಂಬಾತ ಬರೋಬ್ಬರಿ 50 ವರ್ಷಗಳ ಕಾಲ ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಕಾಲಾಪಾನಿ ಜೈಲಿನಲ್ಲಿದ್ದರು. ಆದರೆ ಬಿಡುಗಡೆಯ ನಂತರ ಅವರು ಏನಾದರು ಎಂಬ ಮಾಹಿತಿಯೇ ಇಲ್ಲ. ತಮಿಳುನಾಡಿನ ಸೇತುಪತಿ ಎಂಬುವವರು 24 ವರ್ಷ ಜೈಲಿನಲ್ಲಿದ್ದರು. ಇಂತಹ ಸ್ವಾತಂತ್ರ್ಯ ಸೇನಾನಿಗಳ ಕುರಿತಾಗಿ ಈಗ ಸಂಶೋಧನೆಗಳು ನಡೆದು ಸ್ವಲ್ಪಮಟ್ಟಿನ ವಿವರಗಳು ತಿಳಿದುಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮೇಲ್ಜಾತಿಯವರು ಮಾತ್ರ ಭಾಗವಹಿಸಿದ್ದರು ಎಂಬ ತಪ್ಪು ಮಾಹಿತಿಯೂ ಪ್ರಚಾರದಲ್ಲಿದೆ. ಆದರೆ ಇತಿಹಾಸವನ್ನು ನೋಡಿದಾಗ ವಿವಿಧ ರಾಜ್ಯಗಳ ಕೋಲಿಗರು, ಬೇಡರು, ಕೋಯಾ, ಶಬರರು ಸೇರಿದಂತೆ ಹತ್ತು ಹಲವು ್ಜಅತಿಯ ಜನ ಜಾತ್ಯತೀತವಾಗಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದರು.
    ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಕಲಾವಿದ ಡಾ. ಗೋವಿಂದ ಜೆ.ಮೆಹಂದಳೆ, ನಿವೃತ್ತ ಸೇನಾನಿಗಳಾದ ಬಿ.ಟಿ.ಸೋಮನ್, ಜಿ.ಎಸ್.ವೆಂಕಟೇಶ್, ರಂಗರಾಜು ಬಾಳೆಗುಂಡಿ, ರಕ್ತದಾನಿಗಳಾದ ಬಿ.ಎನ್.ನಾಗರಾಜ್, ಎಂ.ಎಸ್.ನಾಗರಾಜ್, ಕೆ.ಆರ್.ಜ್ಯೋತಿ, ಸಂಧ್ಯಾ ಸುಬ್ರಮಣ್ಯ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts