More

    ಸ್ವಯಂಪ್ರೇರಿತ ರಕ್ತದಾನಿಗಳಿಗೆ ಸನ್ಮಾನ -ಯುವಕರು ರಕ್ತದಾನಕ್ಕೆ ಮುಂದಾಗಲಿ- ಸುಭಾಶ್ಚಂದ್ರ

    ದಾವಣಗೆರೆ: ಇಂದಿನ ದಿನಗಳಲ್ಲಿ ರಕ್ತವು ತುಂಬಾ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಎಸ್. ಸುಭಾಶ್ಚಂದ್ರ ತಿಳಿಸಿದರು.
    ಲೈಫ್ ಲೈನ್ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯಲ್ಲಿ ಗುರುವಾರ, ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನದ ಅರಿವು ಮತ್ತು ಸ್ವಯಂಪ್ರೇರಿತ ರಕ್ತದಾನಿಗಳಿಗೆ ಹಮ್ಮಿಕೊಂಡಿದ್ದ
    ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ಅಲ್ಲದೇ ಜೀವನದುದ್ದಕ್ಕೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ಮತ್ತು ನಿಯಮಿತ ರಕ್ತದಾನ ಮಾಡುವುದು ಅತ್ಯಗತ್ಯ ಎಂದು ಹೇಳಿದರು.
    ತಮಗರಿವಿಲ್ಲದಂತೆ ಮಧುಮೇಹ, ಅಧಿಕ ರಕ್ತದ ಒತ್ತಡದಂತಹ ಅನಾರೋಗ್ಯಗಳಿಗೆ ಕಾರಣವಾದ ಕೊಲೆಸ್ಟ್ರಾಲ್ ಅಂಶವನ್ನು ರಕ್ತದಾನದ ಮುಖಾಂತರ ಕಳೆದುಕೊಂಡು, ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.
    ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ಹನಗವಾಡಿ ಪ್ರಾಸ್ತಾವಿಕ ಮಾತನಾಡಿ ವಿಶ್ವ ರಕ್ತದಾನ ದಿನಾಚರಣೆಯ ಮಹತ್ವ ಮತ್ತು ಹಿನ್ನಲೆಯ ಕುರಿತು ಮಾತನಾಡಿದರು.
    ಲೈಫ್ ಲೈನ್ ರಕ್ತ ನಿಧಿ ಕೇಂದ್ರದಿಂದ ನೀಡುವ ಸೇವೆಗಳು ಮತ್ತು ಪ್ರಮುಖವಾಗಿ ಹಿಮೊಫಿಲಿಯಾ, ಥಲಸ್ಸೇಮಿಯಾವಲ್ಲದೇ, ಎಲ್ಲಾ ಅನುವಂಶಿಕ ರಕ್ತಸ್ರಾವ ರೋಗಿಗಳಿಗೆ ರಕ್ತ ಮತ್ತು ರಕ್ತಾಂಶಗಳನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿರುವುದನ್ನು ತಿಳಿಸಿದರು.
    ಲೈಫ್ ಲೈನ್ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಎಮ್.ಎಮ್ ದೊಡ್ಡಿಕೊಪ್ಪದ್‌ ಅಧ್ಯಕ್ಷತೆ ವಹಿಸಿದ್ದರು.
    ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಡಾ. ಸೃಷ್ಟಿ ಸಾಹುಕಾರ ರಚಿಸಿರುವ ‘ರಕ್ತದಾನ ಅರಿವು’ಎಂಬ ಕನ್ನಡ ಮತ್ತು ಇಂಗ್ಲೀಷ್ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
    ನಗರದ ಖ್ಯಾತ ಅರಿವಳಿಕೆ ತಜ್ಞ ಡಾ. ರಾಜಣ್ಣ ಸಾಹುಕಾರ ಮತ್ತು ಉದ್ಯಮಿ ವಾಸುದೇವ ರಾಯ್ಕರ್ ಮತ್ತು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ ಎಂ.ಎಸ್.ಟಿ.ಸಿ ಯ ಸತೀಶ್ ಮತ್ತು ತೇಜಸ್ ಮತ್ತು ರಕ್ತನಿಧಿ ಕೇಂದ್ರದ ಸಲಹಾ ಮಂಡಳಿಯ ಸದಸ್ಯ ಎ.ಎಂ. ಕೊಟ್ರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ಲೈಫ್ ಲೈನ್ ರಕ್ತ ನಿಧಿ ಕೇಂದ್ರದಲ್ಲಿ ಹಲವಾರು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಶಂಕರಮೂರ್ತಿ, ಪ್ರದೀಪ, ಉಮೇಶ್, ಹರೀಶ್ ಆರ್ಮದ್, ನವ್ಯಾ ರಾಯ್ಕರ್ ಮತ್ತು ಅರುಣ್ ಅವರನ್ನು ಸನ್ಮಾನಿಸಲಾಯಿತು.
    ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಯುವ ಘಟಕದ ಅಧ್ಯಕ್ಷ ಶಿವಕುಮಾರ ಮೇತ್ರಿ ಹಾಗು ಹಿಮೊಫಿಲಿಯಾ ಮಗುವಿನ ತಾಯಿ ಎಸ್.ಶಾರದಾ ಅವರು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ತಿಳಿಸಿದರು.
    ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಹವಳಿ, ಸಿಬ್ಬಂದಿಹಿಮೋಫಿಲಿಯಾ ಭಾದಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಈಶ್ವರ್ ತಳವಾರ್ ನಿರೂಪಿಸಿ ವಂದಿಸಿದರು,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts