More

    ಸ್ವಚ್ಛತೆ ನಿರ್ವಹಣೆಗೆ ಸ್ವಚ್ಛಗ್ರಾಮ

    ಚಿಕ್ಕಬಳ್ಳಾಪುರ : ಇನ್ನು ಮುಂದೆ ಜಿಲ್ಲೆಯ ಗ್ರಾಪಂ ವ್ಯಾಪ್ತಿಯ ಸ್ವಚ್ಛತೆ ನಿರ್ವಹಣೆ ಬಗ್ಗೆ ಕುಳಿತಲ್ಲಿಂದಲೇ ಮಾಹಿತಿ ತಿಳಿದುಕೊಳ್ಳಬಹುದು.

    ಇದಕ್ಕಾಗಿಯೇ ಜಿಪಂ ರೂಪಿಸಿರುವ ಸ್ವಚ್ಛಗ್ರಾಮ ವಿಶೇಷ ಆ್ಯಪ್‌ಗೆ ಶನಿವಾರ ಸಚಿವ ಡಾ ಕೆ.ಸುಧಾಕರ್ ಚಾಲನೆ ನೀಡಿದರು. ಜಿಲ್ಲೆಯಲ್ಲಿ 157 ಗ್ರಾಪಂಗಳಿವೆ. ಗ್ರಾಪಂಗಳು ಕಾಲಕಾಲಕ್ಕೆ ಕೈಗೊಳ್ಳುತ್ತಿರುವ ಸ್ವಚ್ಛತೆ ನಿರ್ವಹಣೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿಯನ್ನು ಆ್ಯಪ್ ತಿಳಿಸುತ್ತದೆ. ಮೊಬೈಲ್‌ನಲ್ಲಿ ಡೌನ್‌ಲೌಡ್ ಮಾಡಿಕೊಂಡು, ಗ್ರಾಪಂಗಳ ಕೆಲಸದ ವೈಖರಿ ಪರಿಶೀಲಿಸಬಹುದು.ಚರಂಡಿ ಸ್ವಚ್ಛತೆ, ಬ್ಲೀಚಿಂಗ್ ಪೌಡರ್, ಸೋಂಕು ನಿವಾರಕ ಸಿಂಪಡಣೆ, ಫಾಗಿಂಗ್ ಬಳಕೆ, ನೀರು ಸಂಗ್ರಹ ಸ್ಥಾವರಗಳು, ಕಸ ವಿಂಗಡಣೆ ಮತ್ತು ವೈಜ್ಞಾನಿಕ ವಿಲೇವಾರಿ ಸೇರಿ ಹಲವು ಅಂಕಿ ಅಂಶ ಮತ್ತು ಚಿತ್ರ ಸಮೇತ ಮಾಹಿತಿಯನ್ನು ಆ್ಯಪ್ ಒಳಗೊಂಡಿದೆ.ಅಧಿಕಾರಿಗಳು ಗ್ರಾಮಗಳಲ್ಲಿ ಸ್ವಚ್ಛತೆಗೆ ನೀಡಿರುವ ಆದ್ಯತೆ ಅರಿವು, ನಿರ್ಲಕ್ಷ್ಯ ವಹಿಸಿದ್ದಾಗ ಜನರಿಗೆದೂರು ಸಲ್ಲಿಸಲು ಅನುಕೂಲವಾಗುತ್ತದೆ.

    ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ನಿರ್ವಹಣೆ ಮತ್ತು ಉಸ್ತುವಾರಿಗೆ ಸ್ವಚ್ಛ ಗ್ರಾಮ ವಿಶೇಷ ಆ್ಯಪ್ ಸಹಕಾರಿಯಾಗಿದೆ, ಡೌನ್‌ಲೌಡ್ ಮಾಡಿಕೊಂಡು ಬೇಕಾದ ಗ್ರಾಮಗಳ ಬಗ್ಗೆ ಜನರು ಮಾಹಿತಿ ಪಡೆಯಬಹುದು.
    ಬಿ.ಫೌಜೀಯಾ ತರನ್ನುಮ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts