More

    ಸ್ಯಾನಿಟರಿ ನ್ಯಾಪ್‌ಕಿನ್ ಬಳಸಲು ಸಲಹೆ – ಮೈತ್ರೇಯಿ ಬಿಸ್ವಾಸ್

    ಬೆಳಗಾವಿ: ಸುರಕ್ಷಿತ ಮತ್ತು ಸ್ವಚ್ಛ ಮಾಸಿಕ ಋತುಚಕ್ರ ನಿರ್ವಹಣೆಗೆ ಪ್ರಾಯಕ್ಕೆ ಬಂದ ಪ್ರತಿ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಅವಶ್ಯಕ. ಆದರೆ, ಇಂದಿಗೂ ಸಹ ಭಾರತದಲ್ಲಿ ಸೌಲಭ್ಯ ವಂಚಿತ ಕೆಲ ಸಮುದಾಯಗಳ ಬಾಲಕಿ-ಮಹಿಳೆಯರಿಗೆ ನ್ಯಾಪ್‌ಕಿನ್ ಖರೀದಿಸಲು ಆರ್ಥಿಕ ಸಾಮರ್ಥ್ಯವಿಲ್ಲ ಎಂದು ಸಂಪೂರ್ಣ ಸಂಸ್ಥೆಯ ಚೇರ್ಮನ್ ಮೈತ್ರೇಯಿ ಆಮ್ಲಾನ್ ಬಿಸ್ವಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

    ನಗರದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಬಾಲಕಿಯರಿಗೆ ಗುರುವಾರ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸಿ ಮಾತನಾಡಿದ ಅವರು, ಸ್ಯಾನಿಟರಿ ಪ್ಯಾಡ್ ಖರೀದಿಸಲಾಗದೆ ಬಟ್ಟೆ, ದಿನಪತ್ರಿಕೆ, ಹುಲ್ಲು ಇನ್ನಿತರ ಅನಾರೋಗ್ಯಕರ ವಿಧಾನ ಬಳಸಿ ಸೋಂಕಿಗೆ ಗುರಿಯಾಗುತ್ತಾರೆ. ಅಂದಾಜಿನ ಪ್ರಕಾರ ದೇಶದ 70 ಪ್ರತಿಶತ ಮಹಿಳೆಯರಿಗೆ ಮಾಸಿಕ
    ಋತುಚಕ್ರದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ ಬಾಲಕಿಯರಿಗೆ ನೆರವು ನೀಡುವ ಅವಕಾಶ ದೊರೆತಿರುವುದು ನಮಗೆ ಸಂತೋಷದ ವಿಷಯವಾಗಿದೆ ಎಂದರು.

    ಮಹೇಶ್ವರಿ ಅಂಧ ಮಕ್ಕಳ ಶಾಲೆಯ 30 ಬಾಲಕಿಯರಿಗೆ ತಲಾ ಎರಡು ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಕೆಟ್ ವಿತರಿಸಲಾಯಿತು. ಅಲ್ಲದೆ, ಮುಂಬೈನ ಕೇಶವಿನ್ಯಾಸ ಶಾಪ್ ಮಾಲೀಕರಾದ ರಮಣ ದೇವಧರ್ ಮತ್ತು ರಮಣ್ ಸೌರವ್ ಅವರನ್ನೊಳಗೊಂಡ ತಂಡ, ಶಾಲೆಯ 90 ಮಕ್ಕಳಿಗೆ ಉಚಿತವಾಗಿ ತಲೆಯ ಕೂದಲು ಕತ್ತರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾಮಾಜಿಕ ಕಾರ್ಯಕರ್ತ ಕಿರಣ ನಿಪ್ಪಾಣಿಕರ್, ಶಾಲೆಯ ಮುಖ್ಯಾಧ್ಯಾಪಕಿ ಅನಿತಾ ಗಾವಡೆ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts