More

    ಸ್ತಬ್ಧವಾಗದ ಹಳೇಹುಬ್ಬಳ್ಳಿ

    ಹುಬ್ಬಳ್ಳಿ: ಕರೊನಾ ವೈರಸ್​ನಿಂದ ಪಾರಾಗಲು ಭಾರತ ಸ್ತಬ್ಧವಾಗಿರಬೇಕೆಂಬ ಆದೇಶಕ್ಕೆ ನಗರದ ಹಳೇಹುಬ್ಬಳ್ಳಿಯಲ್ಲಿ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಲಿಲ್ಲ. ಕಮರಿಪೇಟೆ ಠಾಣೆ ವ್ಯಾಪ್ತಿಯ ಕೌಲಪೇಟೆ, ಹಳೇ ಹುಬ್ಬಳ್ಳಿಯ ಹೆಗ್ಗೇರಿ, ಚೆನ್ನಪೇಟೆಯ ಅಂಬೇಡ್ಕರ್ ಕಾಲನಿ, ಮುಲ್ಲಾ ಓಣಿ ಮತ್ತಿತರೆಡೆ ಶುಕ್ರವಾರವೂ ಜನ ಸಂಚಾರ ಕಂಡುಬಂದಿತು.

    ಜನರು ಗುಂಪಾಗಿ ಸುತ್ತಾಡುವುದು, ಕಟ್ಟೆಯ ಮೇಲೆ ಕುಳಿತಿರುವುದು, ರಸ್ತೆ ಪಕ್ಕ ಹರಟೆ ಹೊಡೆಯುತ್ತಿರುವುದು ಕಾಣಿಸಿತು. ಬೈಕ್​ಗಳಲ್ಲಿ ಮನಬಂದಂತೆ ಸುತ್ತಾಡುತ್ತಿದ್ದರು. ಕೌಲಪೇಟೆ ಎದುರಿನ ರಸ್ತೆಯಲ್ಲಿ ಅನವಶ್ಯಕವಾಗಿ ತಿರುಗುತ್ತಿದ್ದ ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಕಮರಿಪೇಟೆ ಠಾಣೆ ಪೊಲೀಸರು ಬೆತ್ತದ ರುಚಿ ತೋರಿಸಿ, ಮರಳಿ ಕಳುಹಿಸಿದರು.

    ಆದರೆ, ಹಳೇ ಹುಬ್ಬಳ್ಳಿಯ ವಿವಿಧೆಡೆ ಪೊಲೀಸರು ಅನಗತ್ಯವಾಗಿ ತಿರುಗಾಡುತ್ತಿರುವವರನ್ನು ತಡೆಯದೆ, ರಸ್ತೆ ಪಕ್ಕದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

    11 ಗಂಟೆ ನಂತರ ಬಿಗಿ: ಬೆಳಗ್ಗೆ 10 ಗಂಟೆವರೆಗೆ ಜನರು ತರಕಾರಿ, ಹಣ್ಣು ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. 11 ಗಂಟೆಯಾಗುತ್ತಿದ್ದಂತೆ ಜನರೆಲ್ಲ ಮರಳತೊಡಗಿದ್ದರು. ನಂತರವೂ ರಸ್ತೆಯಲ್ಲಿದ್ದವರನ್ನು ಕಿತ್ತೂರು ಚನ್ನಮ್ಮ ವೃತ್ತ ಸೇರಿ ವಿವಿಧೆಡೆ ನಿಂತಿದ್ದ ಪೊಲೀಸರು ವಿಚಾರಿಸತೊಡಗಿದರು. ನಿರ್ದಿಷ್ಟ ಕಾರಣ ಇಲ್ಲದೇ ಬಂದವರಿಗೆ ಲಾಠಿ ಏಟು ಕೊಟ್ಟು ಓಡಿಸಿದರು. ಆಟೋರಿಕ್ಷಾ, ಟಂ ಟಂ ಸೇರಿ ಕೆಲವು ವಾಹನದವರೂ ಲಾಠಿ ರುಚಿ ನೋಡಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts