More

    ಸೌಲಭ್ಯ ನೀಡಲು ಆಗ್ರಹಿಸಿ ಸತ್ಯಾಗ್ರಹ

    ಅಣ್ಣಿಗೇರಿ: ಪಟ್ಟಣದ ಡಿಎಸ್​ಎಸ್ ನಗರದ ಬಳಿ ನಿರ್ವಿುಸುತ್ತಿರುವ ರಾಷ್ಟ್ರೀಯ ಹೆದ್ದಾರಿ ನಂ. 63 ಚತುಷ್ಪಥವನ್ನು ರೈತರು, ವಿದ್ಯಾರ್ಥಿಗಳು ಸುಗಮವಾಗಿ ಸಂಚರಿಸುವಂತೆ ನಿರ್ವಿುಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಕಾರ್ಯಕರ್ತರು ಸೋಮವಾರ ರಾ.ಹೆ. 63ರಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

    ಪಟ್ಟಣದ ಮಧ್ಯ ಹಾಯ್ದುಹೋಗಿರುವ ಚತುಷ್ಪಥದಲ್ಲಿ ಮೇಲ್ಸೇತುವೆ, ಡಿಎಸ್​ಎಸ್ ನಗರದಲ್ಲಿ ಸಾರ್ವಜನಿಕ ಶೌಚಗೃಹ, ದೇಶಪಾಂಡೆ ಪ್ಲಾಟ್​ನಲ್ಲಿ ಸಿ.ಸಿ. ರಸ್ತೆ ನಿರ್ವಿುಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಡಿಎಸ್​ಎಸ್ ನಗರ ಘಟಕದ ತಾಲೂಕು ಸಂಚಾಲಕ ಕುಮಾರ ಸೈದಾಪೂರ ಅವರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಧರಣಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೊಟ್ರೇಶ ಗಾಳಿ ಮಾತನಾಡಿ, ಪಟ್ಟಣದ ಡಿಎಸ್​ಎಸ್ ನಗರದ ಮೂಲ ಸೌಲಭ್ಯಗಳು, ನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಬೇಗನೆ ನಿಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಲಿದೆ ಎಂದು ಹೇಳಿದರು. ಆದರೂ ಧರಣಿ ನಿರತರು ಪಟ್ಟುಬಿಡಲಿಲ್ಲ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ದೂರವಾಣಿ ಮೂಲಕ ಮಾತನಾಡಿ, ಡಿಎಸ್​ಎಸ್ ಕಾರ್ಯಕರ್ತರ ಬೇಡಿಕೆಗಳ ಈಡೇರಿಕೆ ಕುರಿತು ಇನ್ನು 2-3 ದಿನಗಳಲ್ಲಿ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ಕರೆದು ರ್ಚಚಿಸುತ್ತೇನೆ ಎಂದು ಭರವಸೆ ನೀಡಿದರು. ಆಗ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

    ನವಲಗುಂದ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಬಸಪ್ಪ ಮಾದರ, ಸಿದ್ದಲಿಂಗಪ್ಪ ಪಿ. ದಿಡ್ಡಿ, ಶರಣಪ್ಪ ಇಸರಿ, ಶಿವಪ್ಪ ರೋಣದ ಫಕೀರಪ್ಪ ಬೆಳಾರಿ, ದ್ಯಾಮಪ್ಪ ಬಿಷ್ಠಕ್ಕನವರ, ಶಿವಾನಂದ ಚವಡಿ, ಶೆಟ್ಟೆಪ್ಪ ಮುಳಗುಂದ, ಬಸಪ್ಪ ಮಾದರ, ಮಂಜುನಾಥ ಕಿನಕೇರಿ, ಮಂಜುಳಾ ಹೊಸಮನಿ, ರವಿ ಹುಣಶಿಮರದ, ಮಲ್ಲೇಶ ಅಜ್ಜನ್ನವರ, ಶರಣಪ್ಪ ಮುಂದಿನಮನಿ, ಗ್ರಾಮ ಲೆಕ್ಕಾಧಿಕಾರಿ ರಿಷಿಕುಮಾರ ಸಾರಂಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts