More

    ಸೌಧದ ಮುಂದೆ ಉಪನ್ಯಾಸಕರ ಕೂಗು

    ಬೆಳಗಾವಿ: ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಚಳಿಗಾಲದ ಅಧಿವೇಶನಕ್ಕೆ ವಿವಿಧ ಸಂಘಟನೆಗಳ ಪ್ರತಿಭಟನೆ ಬಿಸಿ ಜೋರಾಗಿ ತಟ್ಟಿದೆ. ಅಧಿವೇಶನದ ನಾಲ್ಕನೇ ದಿನವಾದ ಗುರುವಾರವೂ ಸಹ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಹೋರಾಟ ನಡೆಸಿದರು. ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

    ಉಪನ್ಯಾಸಕರ ಪ್ರತಿಭಟನೆ: ನೌಕರಿ ಕಾಯಂ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಉದ್ಯಾನದಲ್ಲಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ನೂರಾರು ಉಪನ್ಯಾಸಕರು ಪ್ರತಿಭಟಿಸಿದರು.

    ಗೌರವ ಭತ್ಯೆ ಪಡೆದು ಅತಿಥಿ ಉಪನ್ಯಾಸಕರಾಗಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ವಯಸ್ಸಿನ ವಯೋಮಿತಿ ಮುಗಿಯುತ್ತ ಬಂದರೂ ಸರ್ಕಾರ ಸೇವೆ ಕಾಯಂಗೊಳಿಸಿ ಸೂಕ್ತ ಭದ್ರತೆ ನೀಡುತ್ತಿಲ್ಲ. ಜೆಒಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ಹೇಗೆ ವಿಲೀನ ಮಾಡಲಾಗಿದೆಯೋ ಅದೇ ರೀತಿ ಅತಿಥಿ ಉಪನ್ಯಾಸಕರನ್ನೂ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಕಾಲೇಜ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು, ಶಿಕ್ಷಕರನ್ನು ಹಾಗೂ ಪೌರಾಡಳಿತ ಇಲಾಖೆಯಲ್ಲಿ ದಿನಗೂಲಿ, ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಕಾಯಂಗೊಳಿಸಲಾಗಿದೆ. ಆದರೆ, ಉಪನ್ಯಾಸಕರನ್ನು ಕಾಯಂ ಮಾಡಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಾಧ್ಯಕ್ಷ ಪ್ರೊ. ಹನುಮಂತಗೌಡ ಕಲ್ಮನಿ, ಪ್ರೊ. ಶಿವಾನಂದ ಕಲ್ಲೂರ, ನಾಗೇಂದ್ರ ಮಂಡ್ಯ, ಎಸ್.ಸೋಮಶೇಖರ, ಚಂದ್ರಶೇಖರ ಕಾಳಣ್ಣವರ, ಪ್ರೊ. ಕೆ.ಛಲವಾದಿ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts